ವಿಜಯ ಸಂಘರ್ಷ
ಶಿವಮೊಗ್ಗ: ಬೆಂಬಲಿಗರೊಂದಿಗೆ ಭಾರೀ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ರಾಮಣ್ಣ ಶೆಟ್ಟಿ ಪಾರ್ಕ್ ನಿಂದ ಮೆರವಣಿಗೆ ಆರಂಭವಾಯಿತು. ರಾಷ್ಟ್ರ ಭಕ್ತರ ಬಳಗದ ಹೆಸರಿನಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಈಶ್ವರಪ್ಪ ಬೆಂಬಲಿಗರು ಕೇಸರಿ ಧ್ವಜಗಳನ್ನು ಪ್ರದರ್ಶಿಸಿದರು. ಜೈ ಶ್ರೀರಾಮ್, ಭಾರತ ಮಾತಾಕಿ ಜೈ, ರಾಷ್ಟಭಕ್ತರ ಬಳಗದ ಅಭ್ಯರ್ಥಿ ಈಶ್ವರಪ್ಪನವರಿಗೆ ಜೈ ಎಂಬ ಘೋಷಣೆ ಗಳನ್ನು ಕೂಗಿದರು.
ಮೆರವಣಿಗೆ ಗಾಂಧಿ ಬಜಾರ್‌ಗೆ ಬರುತ್ತಿದ್ದಂತೆಯೇ ವಿವಿಧ ಸಮುದಾಯಗಳ ಮುಖಂಡರು ಈಶ್ವರಪ್ಪ ಅವರಿಗೆ ಹೂವಿನ ಹಾರ ಹಾಕಿ ಬೆಂಬಲ ಸೂಚಿಸಿದರು. ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಉರಿ ಬಿಸಿಲಿನಲ್ಲಿ ನಾಮಪತ್ರ ಸಲ್ಲಿಕೆಗೆ ತೆರೆದ ವಾಹನದಲ್ಲಿ ಹೊರಟ ಈಶ್ವರಪ್ಪನವರ ಮೆರವಣಿಗೆಗೆ ವಾದ್ಯ ಮೇಳ ರಂಗು ತುಂಬಿತು. ಈ ವೇಳೆ ಬೆಂಬಲಿಗರು ಹೂವಿನ ಮಳೆ ಸುರಿಸಿದರು.
ಮೆರವಣಿಗೆಗೆ ಮೆರಗು ನೀಡಿದ ಮೋದಿ ವೇಷಧಾರಿ:
ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಬಂದ ಪ್ರಧಾನಿ ನರೇಂದ್ರ ಮೋದಿ ವೇಷಧಾರಿ ಯೊಬ್ಬರು ಜನರ ಮನಗೆದ್ದರು.
ಕೆ.ಎಸ್. ಈಶ್ವರಪ್ಪ ಅವರ ಉಮೇದು ವಾರಿಕೆಗೆ ಬೆಂಬಲಿಗ ವಿಶ್ವಾಸ್ ಸೂಚಕ ರಾಗಿದ್ದರು.ಜಿಲ್ಲಾ ಚುನಾವಣಾಧಿ ಕಾರಿಯೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು.