ಆಣೆಕಟ್ಟಿನ ಅಪಾಯಕಾರಿ ಸ್ಥಳದಲ್ಲಿ ಈಜಾಟ: ಪೊಲೀಸರ ಖಡಕ್ ಸೂಚನೆ

ವಿಜಯ ಸಂಘರ್ಷ 
ಭದ್ರಾವತಿ: ಮೊದಲೊಂದು ಮಳೆ ಬಂದು ಹೋದ ನಂತರ, ಕಾಸಿದ ಕಬ್ಬಿಣದ ಮೇಲೆ ನೀರು ಹುಯ್ದದಂತಾಗಿ, ಜನರು ಜಲಮೂಲ ಗಳಲ್ಲಿ ಈಜಾಡುತ್ತಾ ಬಿಸಿಲ ಝಳ ಕಡಿಮೆ ಮಾಡಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. 

ಜನರು ನದಿ, ಹಳ್ಳ, ಕೊಳ್ಳಗಳಲ್ಲಿ ಈಜಾಡುತ್ತಿರುವುದು ಭದ್ರಾವತಿ ಗ್ರಾಮಾಂತರ ಪೊಲೀಸ್‌ ಇಲಾಖೆಯ ಗಮನಕ್ಕೂ ಬಂದಿದೆ. ಭದ್ರಾವತಿ ತಾಲ್ಲೂಕಿನ ಗೋಂದಿ ಆಣೆಕಟ್ಟಿನಲ್ಲಿ ಜನರು ಅಪಾಯವನ್ನು ಲೆಕ್ಕಿಸದೇ ಈಜಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಬೇಸಿಗೆಯ ಬಿಸಿ ತಣಿಸಿಕೊಳ್ಳಲು ನೀರಿನಾಶ್ರಯ ಪಡೆಯುತ್ತಿರುವ ಜನರು ಅಪಾಯಕಾರಿ ಸ್ಥಳಗಳಲ್ಲಿ ಜಾಗ್ರತೆ ವಹಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೂರು ಕೇಳಿದ ಬಂದ ತಕ್ಷಣವೇ ಅಲರ್ಟ್‌ ಆದ ಪೊಲೀಸರು ಸ್ಥಳಕ್ಕೆ ತೆರಳಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 

ಸಾರ್ವಜನಿಕರಿಗೆ ಸ್ಥಳದಲ್ಲಿ ಈಜುವುದು ಎಷ್ಟು ಅಪಾಯಕಾರಿ ಎಂದು ಮನವರಿಕೆ ಮಾಡಿ ಅಲ್ಲಿದ್ದವರಿಗೆ ತಿಳುವಳಿಕೆ ಮೂಡಿಸಿದ್ದಾರೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು