ವಿಜಯ ಸಂಘರ್ಷ
ಭದ್ರಾವತಿ: ನಗರಸಭೆಯಿಂದ ಏರ್ಪಡಿಸಿದ್ದ ಲೋಕಸಭೆ ಚುನಾವಣೆ ಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಮನವಿ ಮಾಡುವ ಜಾಗೃತಿ ಮೂಡಿಸುವ ಬೈಕ್ ರ್ಯಾಲಿ ಯನ್ನು ತಹಸೀಲ್ದಾರ್ ಕೆ.ಆರ್.ನಾಗರಾಜ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಜಾಥಾ ನೇತೃತ್ವ ವಹಿಸಿ ಮತದಾನ ಕುರಿತು ಜಾಗೃತಿ ಮೂಡಿಸಿ ಮಾತನಾಡಿ ಮತದಾರರು ಮತ್ತು ವಿಶೇಷವಾಗಿ ಯುವ ಮತದಾರರು ಚುನಾವಣೆಯಲ್ಲಿ ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಿದರು.
ರ್ಯಾಲಿಯು ನಗರಸಭೆ ಕಚೇರಿ ಆವರಣದಿಂದ ತರೀಕೆರೆ ರಸ್ತೆಯ ಗಾಂಧಿ ಸರ್ಕಲ್, ಮಾಧವಾಚಾರ್ ಸರ್ಕಲ್, ಚೆನ್ನಗಿರಿ ರಸ್ತೆ, ಡಾ: ರಾಜಕುಮಾರ್ ರಸ್ತೆ, ರಂಗಪ್ಪ ವೃತ್ತ, ತಾಲೂಕು ಕಚೇರಿ ರಸ್ತೆ ಮೂಲಕ ಹೊಸ ಸೇತುವೆ ರಸ್ತೆ ಸಿದ್ದಾರೂಢ ಮುಖ್ಯ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಿ.ಹೆಚ್.ರಸ್ತೆಯ ಡಾ: ರಾಜಕುಮಾರ್ ಮುಖ್ಯ ರಸ್ತೆ, ಹಾಲಪ್ಪ ಸರ್ಕಲ್ ಮಾರ್ಗವಾಗಿ ಪುನಹಾ ನಗರಸಭೆ ಕಚೇರಿ ಬಳಿ ರ್ಯಾಲಿ ಬಂದು ಸಂಗಮಗೊಂಡಿತು.
ರ್ಯಾಲಿಯಲ್ಲಿ ನಗರಸಭೆಯ ಕಂದಾಯಾಧಿಕಾರಿ ರಾಜಕುಮಾರ್, ಸಮನ್ವಯಾಧಿಕಾರಿ ಸುಹಾಸಿನಿ, ವ್ಯವಸ್ಥಾಪಕಿ ಸುನೀತಾ, ಇಂಜಿನಿಯರ್ ಸತೀಶ್, ಹಿರಿಯ ಆರೋಗ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿಗಳು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಚೇತನ್ ಕುಮಾರ್ ಮತ್ತು ಸಿಬ್ಬಂದಿಗಳು ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.
Tags:
ಭದ್ರಾವತಿ ಮತದಾರ ಜಾಗೃತಿ