ವಿಜಯ ಸಂಘರ್ಷ
ಶಿವಮೊಗ್ಗ: ಮನೆ ಮನೆಗೆ ತೆರಳಿ ಮತದಾರರ ಮನವೋಲೈಸಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೀತಾಶಿವರಾಜ್ ಕುಮಾರ್ ಅವರನ್ನು ಗೆದ್ದೇ ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್ ಹೇಳಿದರು.
ಅವರು ಅಧ್ಯಕ್ಷರಾದ ಮೇಲೆ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಉಸ್ತುವಾರಿ ಸಚಿವರ ಗೌರವವನ್ನು ಉಳಿಸುವ ಕೆಲಸವನ್ನು ಕಾರ್ಯಕರ್ತ ರೊಂದಿಗೆ ಸೇರಿ ಮಾಡುತ್ತೇವೆ. ಚುನಾವಣೆಯ ಸಂದರ್ಭದಲ್ಲಿ ನನಗೆ ನೀಡಿದ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕ ವಾಗಿ ನಿರ್ವಹಿಸುವೆ ಜಿಲ್ಲಾ ಕಾಂಗ್ರೆಸ್ಸಿನ ಎಲ್ಲಾ ಘಟಕ ಗಳನ್ನು ಒಗ್ಗೂಡಿಸಿ ಮನಸ್ತಾಪಗಳನ್ನೆಲ್ಲ ಸರಿಪಡಿಸಿ ಲೋಕಸಭಾ ಚುನಾವಣೆಯ ಮೇಲೆ ನಿಗಾ ಹಿಟ್ಟುಕೊಂಡು ತತ್‍ಕ್ಷಣ್ ದಿಂದಲೇ ಕಾರ್ಯ ಪ್ರವೃತ್ತರಾಗಿದ್ದೇನೆ ಎಂದರು.
ಇದೊಂದು ಒಳ್ಳೆಯ ಅವಕಾಶ ಈ ಬಾರಿ ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ. ಗ್ಯಾರಂಟಿಗಳು ನಮ್ಮ ಬೆಂಬಲಕ್ಕೆ ನಿಂತೆ ನಿಲ್ಲುತ್ತವೆ. ಪ್ರತಿಯೊಂದು ಫಲಾನುಭವಿಗಳ ಮನೆಗೂ ಕನಿಷ್ಟ 4 ರಿಂದ 5 ಸಾವಿರ ರೂ. ಆದಾಯ ಬರುತ್ತಿದೆ. ಇದು ನುಡಿದಂತೆ ನಡೆದ ಸರ್ಕಾರ. ಎಲ್ಲಾ ಗ್ಯಾರಂಟಿಗಳು ಮಧ್ಯವರ್ತಿಯ ತಲುಪದೇ ನೇರವಾಗಿ ಫಲಾನುಭವಿ ಗಳಿಗೆ ಸೇರುತ್ತವೆ ಎಂದರು.
ನನ್ನ ಬೂತ್ ನನ್ನ ಕೆಲಸ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟನೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.
ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳ ಜೊತೆಗೆ ಕೇಂದ್ರದ ಕಾಂಗ್ರೆಸ್ ನಾಯಕರು ಕೂಡ ತಮ್ಮ ಪ್ರಣಾಳಿಕೆ ಯಲ್ಲಿ 10 ಗ್ಯಾರಂಟಿ ಗಳನ್ನು ಸೇರಿಸಿದ್ದಾರೆ. ಈ ಗ್ಯಾರಂಟಿಗಳು ಕೂಡ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರಣವಾಗುತ್ತವೆ ಎಂದರು.
ಧರ್ಮದ ಹೆಸರಿನಲ್ಲಿ ಭಾವನಾತ್ಮ ಕತೆಯ ಹೆಸರಿನಲ್ಲಿ ಬಿಜೆಪಿಯವರು ಇನ್ನು ಭ್ರಮೆಯಲ್ಲಿದ್ದಾರೆ. ಧರ್ಮದ ಹೆಸರು ಹೇಳಿದರೆ ಸಾಕು, ಮತ ಸಿಗುತ್ತದೆ ಎಂಬ ಆಸೆಯಿಂದ ಇದ್ದಾರೆ. ಆದರೆ, ಆ ಕಾಲ ಮುಗಿಯಿತು. ಇದು ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಅಡಿಯಲ್ಲಿ ಇರುವ ಸರ್ಕಾರವಾಗ ಬೇಕು ಎಂದರು.
ಕೇಂದ್ರ ಸರ್ಕಾರ ಈಗಾಗಲೇ ತನಿಖಾ ಸಂಸ್ಥೆಗಳನ್ನು, ಹೇಳಿದಂತೆ ಕೇಳುವಂತೆ ಮಾಡುತ್ತಿದೆ. ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕೊಳೆ ಬಟ್ಟೆಗಳನ್ನೆಲ್ಲ ವಾಷಿಂಗ್‍ಮಿಷನ್ ಹಾಕಿ ಮತ್ತೆ ಕೊಳೆಯಾಗಿಯೇ ಕಾಣುವಂತೆ ಮಾಡುತ್ತಿದೆ. ಎಲ್ಲಾ ಭ್ರಷ್ಟಾಚಾರಿಗಳ ಬಳಿ ಚುನಾವಣೆ ಬಾಂಡ್‍ನ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಲೂಟಿ ಮಾಡುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಇವರಿಗೆ ಛೀಮಾರಿ ಯಾಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆಯನೂರು ಮಂಜುನಾಥ್, ಎಸ್.ಕೆ. ಮರಿಯಪ್ಪ, ಚಂದ್ರಭೂಪಾಲ್, ಕಲೀಂ ಪಾಶಾ, ಇಸ್ಮಾಯಿಲ್ ಖಾನ್, ವೈ.ಹೆಚ್. ನಾಗರಾಜ್, ರವಿಕುಮಾರ್, ಹೆಚ್.ಸಿ. ಯೋಗೀಶ್, ಕಲಗೋಡು ರತ್ನಾಕರ್, ಬಲ್ಕೀಶ್ ಭಾನು, ಎ. ಅನಿತಾಕುಮಾರಿ, ಮಂಜುನಾಥ್ ಬಾಬು, ಎಸ್.ಪಿ. ದಿನೇಶ್, ರಮೇಶ್ ಹೆಗ್ಡೆ, ಜಿ.ಡಿ. ಮಂಜುನಾಥ್, ಟಿ. ನೇತ್ರಾವತಿ, ರೇಖಾ ರಂಗನಾಥ್, ಶ್ರೀನಿವಾಸ್ ಕರಿಯಣ್ಣ, ರಂಗನಾಥ್, ಯು.ಕೆ.ಶಿವಾನಂದ್, ಶಾಂತವೀರನಾಯ್ಕ ಮತ್ತಿತರರಿದ್ದರು.