ವಿಜಯ ಸಂಘರ್ಷ
ತೀರ್ಥಹಳ್ಳಿ: ಯಾವುದೋ ಪಕ್ಷದಿಂದ ಹಿಂದುತ್ವ ಕಲಿಯಬೇಕಾಗಿಲ್ಲ. ನಾವು ಮೊದಲಿನಿಂದಲೂ ಹಿಂದುತ್ವದಿಂದ ಬೆಳೆದು ಬಂದವರು. ರಾಷ್ಟ್ರದ ಪ್ರೇಮ ಬಿಜೆಪಿ ಯವರಿಂದ ಕಲಿಯಬೇಕಾಗಿಲ್ಲ. ನಮಗೆ ಶಾಲೆಯಲ್ಲೇ ರಾಷ್ಟ್ರ ಪ್ರೇಮ ಕಲಿಸಿದ್ದಾರೆ. ಇನ್ನೊಬ್ಬರನ್ನು ತೆಗಳುವುದರಿಂದ ರಾಷ್ಟ್ರ ಪ್ರೇಮ ಬರುವುದಿಲ್ಲ. ನಮಗೆ ಅಂತಹ ರಾಷ್ಟ್ರ ಪ್ರೇಮ ಬೇಕಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಭಾನುವಾರ ಪಟ್ಟಣದ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡನೇ ಹಂತದ ಮಾತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಹಂತ ತಲುಪಲು ಆಗಿಲ್ಲ. ಜನರ ಬದುಕಿನೊಂದಿಗೆ ಇರುವ ಪಕ್ಷ ಕಾಂಗ್ರೆಸ್. ಮನೆ, ಅನ್ನಭಾಗ್ಯ, ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ನೀಡಿದ್ದೇವೆ. ಈಗ ರಾಷ್ಟ್ರದಲ್ಲಿಯೂ ಕೂಡ ಕೊಡಲು ತೀರ್ಮಾನ ಮಾಡಲಾಗಿದೆ ಎಂದರು.