ಜೀಪ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ:ಚಾಲಕ ಸ್ಥಳದಲ್ಲಿಯೇ ಸಾವು

ವಿಜಯ ಸಂಘರ್ಷ 
ಸಾಗರ: ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ವ್ಯಕ್ತಿ ಯೊಬ್ಬ ಸ್ಥಳ ದಲ್ಲಿಯೇ ಸಾವನ್ನಪ್ಪಿರುವ ಘಟನೆ ಅರಸಾಳು ಬಳಿಯ 9ನೇ ಮೈಲಿಕಲ್ಲಿನ ಸಮೀಪದಲ್ಲಿ ನಡೆದಿದೆ. 

ಸೂಡೂರು ಗೇಟ್ ನ ನಡುವಿನ ಶೆಟ್ಟಿಕೆರೆ ಅಭಯಾರಣ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಡಿಕ್ಕಿಯಾಗಿ ಉರುಳಿಬಿದ್ದಿದೆ. ಘಟನೆಯಲ್ಲಿ ರಿಪ್ಪನ್‌ಪೇಟೆ ಸಮೀಪದ ತಳಲೆ ನಿವಾಸಿ ಪ್ರಭೀನ್ (45) ಸ್ಥಳದಲ್ಲಿಯೇ ಮೃತಪಟ್ಟಿ ದ್ದಾರೆ.ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತದೇಹವನ್ನು ಹೊರತೆಗೆಯಲು ಹರಸಾಹಸ ಪಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು