ಇರುವಕ್ಕಿ ಕೃಷಿ ವಿವಿ ಅಧಿಕಾರಿಗಳಿಬ್ಬರು ಲೋಕ ಬಲೆಗೆ

ವಿಜಯ ಸಂಘರ್ಷ 
ಶಿವಮೊಗ್ಗ: ಕೃಷಿ ವಿವಿಯ ಕಟ್ಟಡದ ಮೇಲ್ಛಾವಣಿ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟಿದ್ದ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಮತ್ತು ಅಕೌಂಟೆಂಟ್ ಗಿರೀಶ್ ಜಿ.ಆರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲ ಯದ ವತಿಯಿಂದ ಚಿತ್ರದುರ್ಗದ ಹಿರಿಯೂರಿನಲ್ಲಿ ಕೆವಿಕೆ ಬಬ್ಬೂರ್ ಫಾರ್ಮ್ ನ ಆಡಳಿತ ವಿಭಾಗದ ಕಚೇರಿಯ ಮೇಲ್ಛಾವಣಿ ಕಾಮಗಾರಿಗೆ 4,23,226 ರೂ.ಗಳ ಟೆಂಡರ್ ಕರೆಯಲಾಗಿದ್ದು, ಸುನೀಲ್ ಎಂಬುವರು 3,59,331 ರೂ.ಗಳಿಗೆ ಗುತ್ತಿಗೆ ಪಡೆದಿದ್ದರು.

ಫೆ.19 ರಂದು ಕಾಮಗಾರಿ ಆರಂಭವಾಗಿ ಮಾ.4 ರಂದು ಕಾಮಗಾರಿ ಪೂರ್ಣವಾಗಿ ರುತ್ತದೆ. ಕಾಮಗಾರಿ ವೀಕ್ಷಿಸಲು ಬಂದು ವಿವಿಯ ಎಇಇ ಲೋಹಿತ್ ಪ್ರಶಾಂತ್ ಕುಮಾರ್ ಹಣ ಬಿಡುಗಡೆಗೆ 40 ಸಾವಿರ ರೂ ಬೇಡಿಕೆ ಇಟ್ಟಿದ್ದರು.

ಕೃಷಿ ವಿವಿಗೆ ಬಂದು ಎಇಇ ರನ್ನ ಭೇಟಿಯಾದ ಸುನೀಲ್ ಡಿಪಾಸಿಟ್ ಆಗಿ ಇಟ್ಟಿದ್ದ ಎಫ್‌ಡಿ ಹಣವನ್ನ ವಾಪಾಸ್ ಕೊಡಲು ಕೇಳಿದ್ದಾರೆ 40 ಸಾವಿರ ರೂ ಹಣವನ್ನ ಅಕೌಂಟೆಂಟ್ ಗಿರೀಶ್ ಗೆ ಕೊಡಿ ಆಗ ಎಫ್ ಡಿ ಹಣ ಬಿಡುಗಡೆ ಮಾಡುವುದಾಗಿ ಹೇಳಿರುವ ಮಾತನ್ನ ಸುನೀಲ್ ವಾಯ್ಸ್ ರೆಕಾರ್ಡ್ ಮಾಡಿಕೊಂಡಿದ್ದರು.

ಲೋಕಾಯುಕ್ತರರಿಗೆ ದೂರು ನೀಡಿದ ಕಾರಣ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿ ಲೋಹಿತ್ ಪ್ರಶಾಂತ್ ಕುಮಾರ, ಎ.ಇ.ಇ ಮತ್ತು ಗಿರೀಶ್. ಜಿ.ಆರ್, ಅಕೌಂಟ್ ಅಸಿಸ್ಟೆಂಟ್ ಇವರು ಇರುವಕ್ಕಿ ಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ರೂ.30,000/- ಲಂಚದ ಹಣವನ್ನು ದೂರುದಾರರಿಂದ ಪಡೆಯುವಾಗ ಕೈಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.

ಅವರಿಂದ ರೂ.30,000/-ಗಳ ಲಂಚದ ಹಣವನ್ನು ಜಪ್ತಿಪಡಿಸಿಕೊಂಡಿದ್ದು, ಆಪಾದಿತರನ್ನು ಬಂಧಿಸಿ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೊಂಡಿರುತ್ತಾರೆ.

ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ, ಎಂ.ಹೆಚ್, ಹಾಗೂ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರನಾಯ್ಕ ಇವರ ಸೂಕ್ತ ಮಾರ್ಗದರ್ಶನ ದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ನಿರೀಕ್ಷಕರುಗಳಾದ ಪ್ರಕಾಶ್, ವೀರಬಸಪ್ಪ ಎಲ್ ಕುಸಲಾಪುರ,ಸಿಬ್ಬಂದಿಗಳಾದ ಯೋಗೇಶ್, ಮಹಂತೇಶ್, ಸುರೇಂದ್ರ ಹೆಚ್.ಜಿ, ಬಿ.ಟಿ ಚನ್ನೇಶ, ಪ್ರಶಾಂತ್ ಕುಮಾರ್, ರಘುನಾಯ್ಕ, ಅರುಣ್ ಕುಮಾರ್ ಪುಟ್ಟಮ್ಮ,ಪ್ರದೀಪ್, ಜಯಂತ್ ಮತ್ತಿತರರು ಭಾಗಿಯಾಗಿದ್ದಾರೆ.

1 ಕಾಮೆಂಟ್‌ಗಳು

  1. Shameless staff members. People including these two, who demands money for discharging their cuties, SHOULD BE SUMMARILY DISMISSED FROM THE SERVICES, so thart, they will understand the value of money, when they earn money privately. Shameless. Shameless

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು