ವಿಜಯ ಸಂಘರ್ಷ
ಭದ್ರಾವತಿ: ಉಕ್ಕಿನ ನಗರದಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆ ಆರ್ಭಟಿಸುತ್ತಿದೆ. ಸಂಜೆ ವೇಳೆ ಗುಡುಗು ಸಹಿತ ಮಳೆ ಸುರಿಯುತ್ತಿದ್ದ ಬಿಸಿಲಿನ ಬೇಗೆಗೆ ವರುಣ ಸ್ವಲ್ಪ ಮಟ್ಟಿಗೆ ತಂಪೆರೆದಿದ್ದಾನೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಬೆಂದುಹೋಗಿರುವ ಜನರಿಗೆ ಮಳೆರಾಯ ತಂಪೆರದರೂ ತಾಪಮಾನದ ಹಿನ್ನಲೆಯಲ್ಲಿ ಮತ್ತೆ ಮರುದಿನ ಬಿಸಿಲಿನ ಝಳ ಹೆಚ್ಚಾಗುತ್ತಿದೆ.
ಮಳೆಯಿಂದಾಗಿ ದಾರಿ ಉದ್ದಕ್ಕೂ ಸಾಲು ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿ ಒಂದೆಡೆ ಯಾದರೆ, ವಿದ್ಯುತ್ ಮಾತ್ರ ಕಣ್ಣಾಮುಚ್ಚಾಲೆ ಆಡುತ್ತಿದೆ. ಒಟ್ಟಾರೆ ಮಳೆಯಿಂದ ಸ್ವಲ್ಪ ಮಟ್ಟಿಗೆ ಭೂಮಿ ತಂಪೆರೆದದ್ದು ಜನರಲ್ಲಿ ಖುಷಿ ಕೊಟ್ಟಿದೆ. ಇವತ್ತಿನ ಅನಾಹುತಗಳ ಬಗ್ಗೆ ವರದಿಯಾಗಿಲ್ಲ. ಸಿಡಿಲಿನ ಅಬ್ಬರ ಜೋರಾಗಿದೆ.
Tags:
ಭದ್ರಾವತಿ ಗುಡುಗು ಸಹಿತ ಮಳೆ