ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಬಿಜೆಪಿ ಯವರನ್ನು ನಂಬಬೇಡಿ: ಮಧುಬಂಗಾರಪ್ಪ

ವಿಜಯ ಸಂಘರ್ಷ 
ಭದ್ರಾವತಿ: ಬಡವರ ಅಭಿವೃದ್ಧಿ ಮತ್ತು ಗ್ಯಾರಂಟಿ ಯೋಜನೆಗಳನ್ನು ತುಲಾಭಾರ ಮಾಡಿ ನೋಡಿದರೆ ಕಾಂಗ್ರೆಸ್ ಪಕ್ಷ ಭಾರವಾಗಿ ಕಂಡು ಬರುತ್ತದೆ. ಏನೂ ಸಾಧಿಸದೆ ಕೇವಲ ಸುಳ್ಳು ಹೇಳುತ್ತಾ ಮೂಗಿಗೆ ತುಪ್ಪ ಸವರುತ್ತಾ ಜನರ ಕಣ್ಣಿಗೆ ಮಣ್ಣೆರೆಚುತ್ತಿರುವ ಬಿಜೆಪಿ ಯವರನ್ನು ನಂಬಬೇಡಿ, ಈ ಬಾರಿ ಬಿಜೆಪಿ ನೆಲ ಕಚ್ಚುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಶಾಸಕ ಬಿ.ಕೆ.ಸಂಗಮೇಶ್ವರ್ ರವರ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. 

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದ ರೈತರ ಮೇಲೆ ಲಾಠಿ ಪ್ರಹಾರ ಜಲ ಪಿರಂಗಿ, ಗ್ಯಾಸ್ ಸಿಡಿಸಿದ ಪ್ರಧಾನಿ ಮೋದಿ ಅವರನ್ನು ವಿಶ್ವ ಮಾನವ ಮಾಡಿದರೆ ನಾವೆಲ್ಲಾ ಸೆಗಣಿ ತಿನ್ನಬೇಕಾಗುತ್ತದೆ ಎಂದರು. 

ನಾವು ಜನರಿಗೆ ನುಡಿದಂತೆ ಯೋಜನೆ ನೀಡಿದ್ದೇವೆ. ಮಹಿಳಾ ತಾಯಂದಿರು ಸಬಲೀಕರಣಗೊಂಡು ಸಂತಸ ಪಟ್ಟಿದ್ದಾರೆ. ರಾಷ್ಟ್ರ ಮಟ್ಟದಲ್ಲೂ ಮತ್ತೆ 5 ಗ್ಯಾರಂಟಿಗಳು ಘೋಷಣೆ ಆಗಲಿದೆ. ಇದರಿಂದಾಗಿ ಕೇಂದ್ರದಲ್ಲೂ ಕಾಂಗ್ರೇಸ್ ಅಧಿಕಾರಕ್ಕೆ ಬರಲಿದೆ. ಶಿವಮೊಗ್ಗ ಲೋಕ ಸಮರದಲ್ಲಿ ಸುಳ್ಳು ಆಸತ್ಯದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಗೆದ್ದು, ಬಂಗಾರಪ್ಪರನ್ನು ಸೋಲಿಸಿದವರಿಗೆ ತಕ್ಕ ಪಾಠವಾಗಲಿದೆ. ವಿಐಎಸ್ ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಿಗೆ ಜೀವ ತುಂಬಲಿದ್ದೇವೆ.

ಏ: 15 ರಂದು ಗೀತಕ್ಕ ನಾಮಪತ್ರ ಸಲ್ಲಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಮತ್ತು ಅನೇಕ ಚಿತ್ರನಟರು ಆಗಮಿಸಲಿದ್ದಾರೆ ಎಂದರು.

ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿ, ಬಿಜೆಪಿಯವರ ಕೊಡುಗೆ ಸಮಾಜಕ್ಕೇನೂ ಇಲ್ಲ. ಕೇವಲ ಬೂಟಾಟಿಕೆ ದೊಂಬರಾಟದ ಕೋಮುವಾದ ರಾಜಕೀಯ ಮಾಡುತ್ತಾ ಅಧಿಕಾರಕ್ಕೆ ಬಂದು ಬಡವರನ್ನು ಮರೆತ ಸರಕಾರವಾಗಿದೆ. ಶ್ರೀಮಂತರಿಗೆ ರತ್ನಗಂಬಳಿ ಹಾಕಿ ದೇಶ ಬರಿದಾಗಿಸಿದೆ. 70 ವರ್ಷ ಕಾಂಗ್ರೇಸ್ ಸರಕಾರ ಏನೂ ಮಾಡಿಲ್ಲವೆಂದು ಹೇಳುವ ಬಿಜೆಪಿಗೆ ಡ್ಯಾಂ ಅಣೆಕಟ್ಟು
ಹಡಗು, ವಿಮಾನ, ರಾಕೆಟ್, ರೈಲು ಇವೆಲ್ಲವನ್ನು ಯಾರು ಮಾಡಿದರೆಂದು ಪ್ರಶ್ನೆ ಹಾಕಬೇಕಾಗಿದೆ. ನಾವೂ ಶ್ರೀರಾಮನ ಭಕ್ತರೇ ಆಗಿದ್ದೇವೆ. ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆಗೆ 3.5 ಸಾವಿರ ಕೋಟಿ ಹಣ ಸುರಿದ ಬಿಜೆಪಿ ಕೇವಲ 5 ಸಾವಿರ ಕೋಟಿ ರೂ ಬಂಡವಾಳ ಹೂಡಿದ್ದರೆ ವಿಐಎಸ್ಎಲ್ ಉಳಿಯುತ್ತಿತ್ತು. ಇನ್ನು ಒಂದು ವರ್ಷದಲ್ಲಿ ಎಂಪಿಎಂ ಸಹ ಆರಂಭವಾಗಲಿದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ 50 ಸಾವಿರ ಲೀಡ್ ಪಡೆಯಲಿದ್ದಾರೆಂದರು.

ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ನಗರ ಬ್ಲಾಕ್ ಅಧ್ಯಕ್ಷ ಎಸ್.ಕುಮಾರ್,ಗ್ರಾಮಾಂತರ ಅಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಮಣಿಶೇಖರ್, ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮುಂತಾದವರಿದ್ದರು. ಇದೇ ಸಂದಭಧದಲ್ಲಿ ಮುಖಂಡರಾದ ಶಿವಕುಮಾ‌ರ್,ಗಣೇಶ್‌ ರಾವ್, ಸಿ.ಜಯಪ್ಪ, ರವಿಕುಮಾ‌ರ್ ಮತ್ತಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು