ವಿಜಯ ಸಂಘರ್ಷ
ವಿಜಯಪುರ: ರಾಜ್ಯ ಸರಕಾರ ನೀಡಿದ್ದ ಭರವಸೆಗಳೆಲ್ಲ ಈಡೇರಿಸಿದೆ. ಹಾಗಾಗಿ ನಮಗೆ ಮತ ಕೇಳಲು ನೈತಿಕತೆ ಇದೆ. ಬಿಜೆಪಿಯವರ ಸುಳ್ಳಿನ ಮಾತಗಳನ್ನು ನಂಬಬೇಡಿ ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಹೇಳಿದರು.
ದೇವರ ಹಿಪ್ಪರಗಿ ಮತಕ್ಷೇತ್ರದ ಕಲಕೇರಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ದೇಶವನ್ನು ಬುಡದಿಂದ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ, ದೇಶವನ್ನು ಹಾಳುಗೆಡವಿ ಪಕೋಡ ಮಾರಲು ಹಚ್ಚಿದ್ದು ಮೋದಿಯವರ ಬಿಜೆಪಿ ಎಂದರು.
ರಮೇಶ ಜಿಗಜಿಣಗಿಯವರು ಮೂವತ್ತು ವರ್ಷ ಲೋಕಸಭೆ ಸದಸ್ಯರಾಗಿ ಏನು ಮಾಡಿದ್ದಾರೆ ಹೇಳಿ.? ಇದು ಬದಲಾವಣೆಯ ಸಮಯ. ಅವರನ್ನು ಬದಲಿಸಿ, ನಮಗೆ ಬೆಂಬಲಿಸಿ ಎಂದು ವಿನಂತಿಸಿದರು.
ಜನರ ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗಲು ಕಾಂಗ್ರೆಸ್ ಪಕ್ಷ ಕೇಂದ್ರ ದಲ್ಲಿ ಅಧಿಕಾರಕ್ಕೆ ಬರಬೇಕು. ಜನರ ಜೀವನ ಸುಧಾರಿಸಬೇಕಾದರೆ ನಮ್ಮ ಪಕ್ಷಕ್ಕೆ ಮತ ನೀಡಿ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವಕರು ಉದ್ಯೋಗ ಹರಸಿ ಗುಳೆ ಹೋಗುತ್ತಿದ್ದಾರೆ. ರಾಜ್ಯಸರ್ಕಾರ ಯುವ ನಿಧಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ಅದೇ ಮಾದರಿ ಕೇಂದ್ರ ದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಹಕರಿಸುವಂತೆ ಕೋರಿದರು.
ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ನುಡಿದಂತೆ ನಡೆದದ್ದು ಹಾಗೂ ಮುಂದೆಯೂ ನಡೆಯುವುದು ಕಾಂಗ್ರೆಸ್ ಎಂದರು.
ಮುಖಂಡರಾದ ಸುಭಾಶ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ, ಡಾ.ಪ್ರಭುಗೌಡ ಲಿಂಗದಳ್ಳಿ, ಆನಂದಗೌಡ ದೊಡ್ಡಮನಿ, ಗೌರಮ್ಮ ಮುತ್ತತ್ತಿ, ಲಲಿತಾ ದೊಡ್ಡಮನಿ, ಸರಿತಾ ನಾಯಕ, ರಮೀಜಾ ನದಾಫ್, ಬಶೀರ್ ಬೇಪಾರಿ, ಬಾಳಾಸಾಹೇಬ ಪಾಟೀಲ, ಬಾಪುಗೌಡ ಪಾಟೀಲ, ಸಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಪರಶುರಾಮ ದಿಂಡವಾರ, ರಮೇಶ ಗುಬ್ಬೇವಾಡ, ದಾವಲಸಾಬ ನಾಯ್ಕೋಡಿ, ದೇವೇಂದ್ರ ಜಂಬಗಿ, ಕಾಶೀನಾಥ ತಳವಾರ, ರವೀಂದ್ರ ಸುಧಾಕರ, ಶಿವರಾಯ ಮೋಪಗಾರ, ರಾಜ ಅಹ್ಮದ ಅನೇಕರಿದ್ದರು.
Tags:
ವಿಜಯಪುರ ಸುದ್ದಿ