ವಿಜಯ ಸಂಘರ್ಷ
ತೀರ್ಥಹಳ್ಳಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಲೋಕಸಭಾ ಚುನಾವಣಾ ಸಮಿತಿ ಚೀಫ್ ಕೋ ಆರ್ಡಿನೇಟರ್ ಆಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ರಾಣಿ ಸತೀಶ್, ಇನ್ಸಾಲ್ ಅನ್ಸಾರಿ, ಎಂ.ಶಿವಣ್ಣ, ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ನೇಮಿಸಿ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಆದೇಶ ಪ್ರಕಟಿಸಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಶಕುಂತಲಾ ಶೆಟ್ಟಿ,ಪ್ರಕಾಶ್ ರಾಥೋಡ್, ಸಿ.ಎಸ್. ದ್ವಾರಕಾನಾಥ್, ಜಿ.ಇ. ಮಂಜುನಾಥ್, ಸುಧೀರ್ ಕುಮಾರ್ ಮುರೋಳ್ಳಿ, ವೀಣಾ ಅಚ್ಚಯ್ಯ, ಪ್ರಸಾದ್ ಬಾಬು, ಕೃಪಾ ಆಳ್ವಾ, ಡಿ. ಮಂಜುನಾಥ್, ಅಮೃತೇಶ್ವರ ಅವರುಗಳು ನೇಮಕವಾಗಿದ್ದಾರೆ.