ತಗ್ಗಿದ ಶರಾವತಿ ಹಿನ್ನೀರು: ಮುಪ್ಪಾನೆ ಲಾಂಚ್‌ ಸ್ಥಗಿತ

ವಿಜಯ ಸಂಘರ್ಷ 
ಸಾಗರ: ಮುಪ್ಪಾನೆ ಲಾಂಚ್‌ ಸೇವೆ ನಾಳೆಯಿಂದ ಸ್ಥಗಿತಗೊಳ್ಳಲಿದೆ. ಕರೂರು ಹೋಬಳಿಯಿಂದ ಕಾರ್ಗಲ್–ಜೋಗಕ್ಕೆ ಸಂಪರ್ಕ ಕಲ್ಪಿಸುವ ಲಾಂಚ್‌ ಮಾರ್ಗವಾಗಿದೆ. 

ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತುಮರಿ ಗ್ರಾ ಪಂ ವ್ಯಾಪ್ತಿಯ ಹಲ್ಕೆ– ಮುಪ್ಪಾನೆ ಬಳಿ ಸಂಚಾರಕ್ಕೆ ಮರದ ದಿಣ್ಣೆಗಳು, ಮರಳಿನ ದಿಬ್ಬಗಳು ಅಡ್ಡಿಯಾಗು ತ್ತಿವೆ. ಮುಂಜಾಗ್ರತಾ ಕ್ರಮವಾಗಿ ಹಾಗೂ ಜನರ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. 

ಇನ್ನೂ ಹಸಿರುಮಕ್ಕಿ ನಲ್ಲಿ ಲಾಂಚ್‌ ಮೇ 15 ರವರೆಗೂ ಸೇವೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು