ವಿಜಯ ಸಂಘರ್ಷ
ಭದ್ರಾವತಿ: ದಲಿತರ ಭೂಮಿಯನ್ನು ಎಂಪಿಎಂ ನವರು ಆಕ್ರಮಿಸಿರುವು ದನ್ನು ಜಂಟಿ ಸರ್ವೆ ಮಾಡಿಸಿ, ಹದ್ದುಬಸ್ತು ಮಾಡಿ ಜಮೀನು ಬಿಡಿಸಿಕೊಡುವಂತೆ ಒತ್ತಾಯಿಸಿ ಮೇ:13 ರಿಂದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಕುಳಿತಿರುವ ದಲಿತರಿಗೆ ಭೂಮಿ ಬಿಡಿಸಿ ಕೊಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶನಿವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹೊಳೆಹೊನ್ನೂರು ಹೋಬಳಿ, ಡಿ.ಬಿ. ಹಳ್ಳಿ ಗ್ರಾಮದ ಹಾಗೂ ಅರದೊಟ್ಟಲು ಗ್ರಾಮದ 14 ದಲಿತ ಜನರು ತಮಗೆ ಸೇರಿದ ವಿಸ್ತೀರ್ಣ 8 ಎಕರೆ 20 ಗುಂಟೆ ಜಮೀನನ್ನು ಅರದೊಟ್ಲು ಗ್ರಾಮದ ಗ್ರಾಮಠಾಣಕ್ಕೆ ಬಿಟ್ಟು ಕೊಟ್ಟಿದ್ದ ರಿಂದ ಬದಲಿಗೆ ಸರ್ಕಾರವು 14 ಜನರಿಗೆ ತಲಾ 2 ಎಕರೆಯಂತೆ ಒಟ್ಟು 28 ಎಕರೆ ಭೂಮಿ ಯನ್ನು ಚಂದನಕೆರೆ ಗ್ರಾಮದ ಸ. ನಂ 12 ರ 413 ಎಕರೆ ಗೋಮಾಳ ಜಮೀನಿನ ಪೈಕಿ 28 ಎಕರೆ ಭೂಮಿ ಯನ್ನು ಎಲ್ ಎನ್ ಡಿ 147/60-61 ರಂತೆ ಸಾಗುವಳಿ ಚೀಟಿಯನ್ನು ಸರ್ಕಾರ ನೀಡಿರುತ್ತದೆ ಹಾಗೂ ಚಂದನಕೆರೆಯ ಪರಿಶಿಷ್ಠ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಸುಮಾರು 21 ಜನ ದಲಿತರು ಹಾಗೂ ಕಲ್ಲಿಹಾಳ್ ಗ್ರಾಮದ 20 ಜನ ತಲಾ 2 ಎಕರೆಯಂತೆ ಸಾಗುವಳಿ ಮಾಡುತ್ತಾ ನಮೂನೆ 50-53 ರಲ್ಲಿ ಅರ್ಜಿ ಸಲ್ಲಿಸಿ ಸ್ವಾಧೀನದಲ್ಲಿದ್ದರು 1984-85ರವರೆಗೆ ಮೇಲ್ಕಂಡರವರೆಲ್ಲರೂ ಸ್ವಾಧೀನ ಅನುಭವ ದಲ್ಲಿರುತ್ತಾರೆ. ಆದರೆ ದಲಿತರು ಸಾಗುವಳಿ ಮಾಡುತ್ತಾ ಬಂದಿದ್ದು ಭೂಮಿಯನ್ನು ಅನಕ್ಷರಸ್ಥರು ಹಾಗೂ ಅಸಹಾಯಕ ದಲಿತರನ್ನು ಹೆದರಿಸಿ ದೌರ್ಜನ್ಯ ಮಾಡಿ 1985-86 ರಲ್ಲಿ ಎಂ.ಪಿ.ಎಂ ನವರು ನೀಲಗಿರಿ ನೆಡು ತೋಪು ಮಾಡಿದ್ದು ದಲಿತರು ಭೂಮಿಯ ಮೇಲೆ ಹೋಗದಂತೆ ತಡೆದು ದೌರ್ಜನ್ಯವೆಸಗಿರುತ್ತಾರೆ.
ದಲಿತರು ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡುತ್ತಲೇ ಹೋರಾಡುತ್ತಿ ದ್ದರೂ ಎಂಪಿಎಂ ನವರ ದೌರ್ಜನ್ಯ ದಿಂದ ಭೂಮಿಯು ಅವರ ಕೈಗೆ ಸೇರಲಿಲ್ಲ ಕಛೇರಿಗಳಿಗೆ ಅಲೆದಾಡು ವುದು ಅವರ ಜೀವನವಾಗಿದೆ ಇತ್ತೀಚೆಗೆ ಎಂ.ಪಿ.ಎಂ. ನವರು ದೌರ್ಜನ್ಯದಿಂದ ಕಿತ್ತುಕೊಂಡಿದ್ದ ದಲಿತರಿಗೆ ಸೇರಿದ ಭೂಮಿಯನ್ನು ಕೆಲವರು ಅಕ್ರಮವಾಗಿ ಬಗರ್ ಹುಕುಂ ಸಾಗುವಳಿ ಮಾಡಲು ಮುಂದಾಗಿರು ವುದು ಸಮಿತಿಯ ಗಮನಕ್ಕೆ ಬಂದಿರುತ್ತದೆ. ತಹಶೀಲ್ದಾರ್ ರವರು ಕೂಡಲೇ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿ ಗಳೊಂದಿಗೆ ಆಗಮಿಸಿ ಜಂಟಿ ಸರ್ವೆ ಕಾರ್ಯ ನಡೆಸಿ ಸರ್ಕಾರದಿಂದ ದಲಿತರಿಗೆ ಚಂದನಕರೆ ಗ್ರಾಮದ ಸರ್ವೆ ನಂ 12 ರಲ್ಲಿ ದಲಿತರಿಗೆ ಮಂಜೂರಾದ ಭೂಮಿಯನ್ನು ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಮಾಡಿಸಿ ದಲಿತರಿಗೆ ಭೂಮಿಯನ್ನು ಬಿಡಿಸಿಕೊಡ ಬೇಕೆಂದು ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ಹಂತದಲ್ಲಿದ್ದ ಭೂಮಿಯನ್ನು ಸಾಗುವಳಿ ಪತ್ರ ಕೊಡಿಸಬೇಕೆಂದು ಒತ್ತಾಯಿಸಿ ಮೇ: 13 ರಿಂದ ಚಂದನಕೆರೆ ಗ್ರಾಮದ ಸರ್ವೆ ನಂ 12 ರಲ್ಲಿ ದಲಿತರಿಗೆ ಮಂಜೂರಾದ ಭೂಮಿಯಲ್ಲಿಯೇ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಇದುವರೆಗೂ ತಾಲ್ಲೂಕು ಆಡಳಿತ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.
ತಾಲ್ಲೂಕು ಆಡಳಿತ ಕೂಡಲೇ ಕ್ರಮ ವಹಿಸಿ ಧರಣಿ ನಿರತರಿಗೆ ಅವರ ಭೂಮಿ ಯನ್ನು ಕೊಡಿಸಿ ಕೊಡಬೇಕೆಂದು ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಅರಸ್ ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಮಿತಿಯ ತಾಲ್ಲೂಕು ಪ್ರಧಾನ ಸಂಚಾಲಕ ಎಸ್ ಪುಟ್ಟರಾಜು ನೇತೃತ್ವದಲ್ಲಿ ಪರಮೇಶ್ ಸೂಗೂರ, ಎಸ್ ಗೋವಿಂದರಾಜು, ಟಿ ರುದ್ರೇಶ್ ಅತ್ತಿಗುಂದ, ಇಮ್ರಾನ್ ಪಾಷಾ, ರಾಮಚಂದ್ರ ಜೆ, ಪ್ರಭಾಕರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Tags:
ಭದ್ರಾವತಿ ದಸಂಸ ಪ್ರತಿಭಟನೆ