ವಿಜಯ ಸಂಘರ್ಷ
ಭದ್ರಾವತಿ: ಸಿದ್ದಾರೂಢ ನಗರದ ನಿವಾಸಿ ಲಾಟರಿ ಸೂರಿ ಮನೆ ಮೇಲೆ ದಾಳಿ ನಡೆಸಿದ ಶಿವಮೊಗ್ಗ ಸಹಕಾರಿ ನಿಬಂಧಕ ಕಚೇರಿ ಸಹಾಯಕ ನಿಬಂಧಕರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆಯತ್ನಿಸಿರುವ ಘಟನೆ ನಡೆದಿದೆ.
ಮೀಟರ್ ಬಡ್ಡಿ ವ್ಯಾಪಾರ ಮತ್ತು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಾನೆಂದು ಆರೋಪಿಸಿ ಜನರು ಲಾಟರಿ ಸೂರಿ ವಿರುದ್ಧ ಸಹಕಾರಿ ನಿಬಂಧಕರ ಕಚೇರಿಗೆ ದೂರು ನೀಡಿದ್ದರು.
ಅದರ ಆಧಾರದ ಮೇಲೆ ಹೊಸಮನೆ ಠಾಣೆ ಮುಂದ ಪಿಎಸ್‌ಐ ನೇತೃತ್ವದಲ್ಲಿ ಅಧಿಕಾರಿಗಳು, ಮನೆ ಮೇಲೆ ದಾಳಿ ಮಾಡಿದ್ದಾರೆ.
ಆ ವೇಳೆ ಮನೆಗೆ ಬಂದ ಸೂರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಮತ್ತು ಪೊಲೀಸರ ಸಮಕ್ಷಮದಲ್ಲೇ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಐಪಿಸಿ ಕಲಂ 356 ಅಡಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.