ಕಾಂಗ್ರೆಸ್ ಸರ್ಕಾರ ಮೇಲೆ ನಮಗೆ ಅನುಮಾನವಿದೆ ಪ್ರಕರಣ ಸಿಬಿಐಗೆ ಒಪ್ಪಿಸಲು ಶಾಸಕ ಹೆಚ್.ಟಿ ಮಂಜು ಆಗ್ರಹ

ವಿಜಯ ಸಂಘರ್ಷ 
ಕೆ ಆರ್ ಪೇಟೆ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಕುರಿತಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ವತಿಯಿಂದ ಪಟ್ಟಣದ ಟಿ.ಬಿ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಡಿ.ಕೆ. ಶಿವಕುಮಾರ್ , ಎಲ್.ಆರ್ ಶಿವರಾಮೇಗೌಡ ಇವರೆಲ್ಲರೂ ಸೇರಿ ಲೋಕಸಭಾ ಚುನಾವಣೆಗಳ ಸೋಲಿನ ಹತಾಶೇಯಿಂದ ಪೆನ್ ಡ್ರೈವ್ ಹಂಚುವ ಮೂಲಕ ಹೆಣ್ಣಿನ ಮಾನವನ್ನು ಹರಾಜು ಹಾಕಿದ್ದಾರೆ ಎಂದು ತಿಳಿಸಿದರು.

ರಾಜಕೀಯ ಲಾಭಕ್ಕಾಗಿ ಇದಕ್ಕೆ ತನಿಖೆ ನೆಪದಲ್ಲಿ ರಚಿಸಿರುವ ಎಸ್.ಐ.ಟಿ ಎಂಬ ತಂಡ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅವರ ಅಣಿತಿಯಂತೆ ನಡೆಯುವ ತಂಡವಾಗಿದೆ. ಈ ತಂಡ ಎಸ್.ಐ.ಟಿ ಎಂದರೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರ ಇನ್ವೆಸ್ಟಿಗೇಷನ್ ಟೀಮ್, ಇದರಿಂದ ಯಾವುದೇ ನ್ಯಾಯ ಸಿಗುವುದಿಲ್ಲ. ಕೂಡಲೇ ಈ ಹಗರಣವನ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು. 

ಇವರು ದೇವೆಗೌಡರ ಕುಟುಂಬವನ್ನ ಆರೋಪಿಗಳನ್ನಾಗಿ ಮಾಡಲು ಸಂಚುರೂಪಿ ಸುವ ತಂಡವಾಗಿದೆ. ಈ ತಪ್ಪನ್ನ ಮಾಡಿದವರು ಯಾರೇ ಆದರೂ ನೇಣಿಗೇರಿಸಲಿ ಅದಕ್ಕಿಂತ ಮೊದಲು ಹೆಣ್ಣಿನ ಮಾನ ಹರಣ ಮಾಡಿದ ಪೆನ್ ಡ್ರೈವ್ ವಿತರಿಸಿದ ಎಲ್ಲರನ್ನು ಹಿಡಿದು ಅವರನ್ನು ನೇಣಿಗಿರಿಸಲಿ. ಮನೆಯಲ್ಲಿ ಇದ್ದಂತಹ ಹೆಣ್ಣು ಮಕ್ಕಳ ಮಾನವನ್ನು ಬೀದಿಗೆಳೆದು ಅವರು ಕುಟುಂಬ, ಗಂಡನಿಂದ ದೂರವಾಗುವಂತೆ ಮಾಡಿದ್ದಾರೆ.ಇಂತಹ ನೀಚ ಕೃತ್ಯ ಮಾಡುವಲ್ಲಿ ಶಿವರಾಮೇಗೌಡ, ಡಿ.ಕೆ ಶಿವಕುಮಾರ್ ನಿಸೀಮರು, ಕೂಡಲೇ ಡಿ.ಕೆ ಶಿವಕುಮಾರ್ ಶಿವರಾಮೇಗೌಡರ ವಿರುದ್ಧ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು. 

ಹೆಣ್ಣಿನ ಮಾನ ಹರಣ ಮಾಡಿದ ಕಾಂಗ್ರೆಸ್ ಸರ್ಕಾರ ಅದರ ನಾಯಕರುಗಳನ್ನು ಕೂಡಲೇ ಅಧಿಕಾರದಿಂದ ಇಳಿಸಿ ನ್ಯಾಯಯುತ ತನಿಖೆ ನಡೆಸುವಂತೆ ಒಕ್ಕರಳಿನಿಂದ ಆಗ್ರಹಿಸಿ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು. ಜೆಡಿಎಸ್ ಕಾರ್ಯಕರ್ತರು ಸುಮನ್ನೇ ಕುರುವ ವ್ಯಕ್ತಿಗಳಲ್ಲ ಸೂಕ್ತ ತನಿಖೆ ಆಗದಿದ್ದರೆ ಮುಂದಿನ ದಿನಗಳಲ್ಲಿ ಹೋಬಳಿ ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಪ್ರತಿಭಟನೆಗಳನ್ನ ನಡೆಸುತ್ತೇವೆ. ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲು ಹೊರಟಾಗ ಡಿವೈಎಸ್‌ಪಿ ಡಾ.ಸುಮಿತ್ ಮತ್ತು ಪೊಲೀಸರು ಏಕೆ ತಡೆಯುತ್ತೀರಿ..? ಇವರು ಮಾಜಿ ಪ್ರಧಾನಿ ದೇವೇಗೌಡರ ಪುತ್ತಳಿಗೆ ಚಪ್ಪಲಿಯಿಂದ ಹೊಡೆದಾಗ ಅವರ ಮೇಲೆ ಏಕೆ ನಿಮ್ಮ ಪೊಲೀಸರು ಕ್ರಮ ಜರುಗಿಸಲಿಲ್ಲ ಇದು ಪೊಲೀಸರ ಅಧಿಕಾರ ಶಾಯಿ ತನ ತೋರುತ್ತದೆ ಹಾಗೂ ದೇವೇಗೌಡರ ಕುಟುಂಬವನ್ನ ಷಡ್ಯಂತರಗಳಿಂದ ನಾಶ ಮಾಡುವ ತಂತ್ರ ನಡೆಯುತ್ತಿದೆ ಎಂದು ಶಾಸಕ ಹೆಚ್. ಟಿ ಮಂಜು ತಮ್ಮ ಆಕ್ರೋಶ ಹೊರಹಾಕಿದರು.

ಪೊಲೀಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಡಿಸಿಎಂ ಡಿಕೆ ಶಿವಕುಮಾರ್ ಪ್ರತಿ ಕೃತಿ ದಹನಕ್ಕೆ ಪೊಲೀಸರು ಅಡ್ಡಿ ಪಡಿಸಿದರು. ಜೆಡಿಎಸ್ ಕಾರ್ಯಕರ್ತರು ದಹಿಸಿದ ಹಿನ್ನೆಲೆಯಲ್ಲಿ ಈ ರೀತಿ ಅಡ್ಡ ಪಡಿಸುವವರು ನಮ್ಮ ಪ್ರತಿಭಟನೆಗೆ ವಿರುದ್ಧವಾಗಿ ಕಾಂಗ್ರೆಸಿನ ಹಣತೆಯಂತೆ ನಡೆಯುವವರು ಎಂದು ಕೆಲ ಸಮಯ ಪೊಲೀಸ್ ಮತ್ತು ಜೆಡಿಎಸ್ ಕಾರ್ಯಕರ್ತರು ನಡುವೆ ಮಾತಿನ ಚಕಮಕಿ ಜೊತೆಗೆ, ಪೊಲೀಸರು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸರ್ಕಾರದ ಕೈ ಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. 

ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದಂತಹ ಜೆಡಿಎಸ್ ಕಾರ್ಯಕರ್ತರು ಎಲ್.ಆರ್ ಶಿವರಾಮೇಗೌಡ ,ಡಿ.ಕೆ ಶಿವಕುಮಾರ್, ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಕಾಂಗ್ರೆಸ್ ಸರ್ಕಾರವನ್ನ ಕಿತ್ತೊಗೆಯಿರಿ ಎಂದು ಆಗ್ರಹಿಸಿದ್ದರು.

ಪ್ರತಿಭಟನೆಯ ವೇಳೆಯಲ್ಲಿ ಪ್ರತಿಭಟನಾಕಾರರು ಎಲ್ ಆರ್ ಶಿವರಾಮೇಗೌಡ, ಡಿಸಿಎಂ ಡಿಕೆ ಶಿವಕುಮಾರ್ ರವರ ಪ್ರತಿಕೃತಿಗೆ ಚಪ್ಪಲಿ ಪರಕೆಗಳಿಂದ ಒಡೆಯುತ್ತಾ ಅವರುಗಳ ವಿರುದ್ಧ ದಿಕ್ಕಾರವನ್ನು ಕೂಗಿದರು.

ಪ್ರತಿಭಟನೆಗೆ ಡಿ.ವೈ.ಎಸ್.ಪಿ ಡಾ:ಸುಮಿತ್ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆನಂದೇಗೌಡ ನೇತೃತ್ವದಲ್ಲಿ ಬಂದುಬಸ್ತ್ ಒದಗಿಸಲಾಗಿತ್ತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್. ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ಮಾಜಿ ಅಧ್ಯಕ್ಷ ಎಂ.ಬಿ ಹರೀಶ್, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ ಅಶೋಕ್,ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನೆಗೋಳ ಬಿ.ಎಂ ಕಿರಣ್,ತಾ ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಜೆಡಿಎಸ್ ಕಾನೂನು ಘಟಕದ ತಾಲೂಕು ಅಧ್ಯಕ್ಷ ವಿ.ಎಸ್ ಧನಂಜಯ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಅಗ್ರಹಾರ ಬಾಚಹಳ್ಳಿ ನಾಗೇಶ್,ಟಿ. ಎ ಪಿ ಸಿ ಎಂ ಎಸ್ ನಿರ್ದೇಶಕ ಬಲದೇವ್, ಜಿ.ಪಂ ಮಾಜಿ ಉಪಾಧ್ಯಕ್ಷ ಗಾಯಿತ್ರಿ ರೇವಣ್ಣ,ಮಾಜಿ ನಿರ್ದೇಶಕ ಹೆಚ್.ಟಿ ಲೋಕೇಶ್, ಚೌಡೇನಹಳ್ಳಿ ನಾಗರಾಜು,ಯುವ ಮುಖಂಡ ರಾದ ಹೆಗ್ಗಡಹಳ್ಳಿ ಅಲೋಕ್ ಕುಮಾರ್, ಮಾಕವಳ್ಳಿ ಸುಕಂದರಾಜು, ಲಿಂಗಾಪುರ ಹರೀಶ್, ಮಾರ್ಗೋನಹಳ್ಳಿ ಮಂಜುನಾಥ್, ಐಕನಹಳ್ಳಿ ದೇವೇಗೌಡ,ಸಾಧುಗೊನಹಳ್ಳಿ ಲೋಕೇಶ್, ಲೇನಿನ್ ಹೌಸ್ ಲೋಕೇಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಪ್ರದೀಪ್,ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.

(ವರದಿ ಮನು ಮಾಕವಳ್ಳಿ ಕೆ ಆರ್ ಪೇಟೆ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು