ವಿಜಯ ಸಂಘರ್ಷ
ಸಾಗರ: ಈಗ ನಡೆಯುತ್ತಿರುವ ಚುನಾವಣೆ ತಾಯಂದಿರ, ರೈತರ, ಮಕ್ಕಳ, ಯುವ ಜನತೆಯ ಭವಿಷ್ಯದ ಚುನಾವಣೆಯಾಗಿದೆ. ಮತ್ತೊಮ್ಮೆ ಮೋದಿ ಯವರು ಪ್ರಧಾನಿ ಯಾಗಿಸುವ ಹೊಣೆ ತಮ್ಮೆಲ್ಲರ ಮೇಲಿದೆ ಜಿಲ್ಲೆಯಲ್ಲಿ ಇನ್ನಷ್ಟು ಪ್ರಗತಿಗಾಗಿ ಕಮಲದ ಚಿಹ್ನೆಗೆ ಮತ ನೀಡಿ ನನ್ನನ್ನು ಗೆಲ್ಲಿಸಿಕೊಡ ಬೇಕೆಂದು ಬಿ.ಜೆ.ಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಬುಧವಾರ ಗೌತಮಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ತಾಳಗುಪ್ಪದವರೆಗೆ ರೈಲ್ವೆ ವ್ಯವಸ್ಥೆಯಾಗಿದೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣವಾಗಿದೆ, ಆಯುಷ್ಮಾನ್ ಕಾರ್ಡ್, ಕಿಸಾನ್ ಸಮ್ಮಾನ್ ಯೋಜನೆ, ಭಾಗ್ಯಲಕ್ಷ್ಮಿ ಮುಂತಾದ ಯೋಜನೆಗಳು ಜನಪರವಾಗಿವೆ. ದೇಶದ ಅಭಿವೃದ್ಧಿ ಗಾಗಿ ಮತ್ತೊಮ್ಮೆ ಮೋದಿಜಿಯವರ ಕೈ ಬಲಪಡಿಸುವ ಕೆಲಸ ನಿಮ್ಮಿಂದಾಗ ಬೇಕಿದೆ. ಅದಕ್ಕಾಗಿ ಕಮಲದ ಗುರುತಿಗೆ ಮತ ನೀಡಿ ಎಂದು ಕೇಳಿದರು.
ರಾಜ್ಯದಲ್ಲಿ ಪ್ರಸ್ತುತ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ.ಬರಗಾಲದಲ್ಲಿ ಯಾರಿಗೂ ಸಹ ಸಹಾಯುನುದಾನ ಬಂದಿಲ್ಲ. ಕಾಂಗ್ರೆಸ್ ನ ಗ್ಯಾರಂಟಿಯ ವಾರಂಟಿ ಮುಗಿದಿದೆ. ಹಿಂದಿನ ನಮ್ಮ ಸರ್ಕಾರದಲ್ಲಿ ಜಾರಿಯಾದ ಕಾಮಗಾರಿ ಗಳ ಮುಂದೆ ತಮ್ಮ ಬ್ಯಾನರ್ ಹಾಕಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರದಿಂದ ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಲ್ಲಿ ಅಭಿವೃದ್ಧಿ ಯಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ಹಿಂದೆ ರಸ್ತೆ ಹೇಗಿತ್ತು ಈಗ ಹೇಗಾಗಿದೆ ಎಂಬುದು ಜನರ ಕಣ್ಮುಂದೆಯೇ ಇದೆ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಘವೇಂದ್ರರಿಗೆ ಮತ ನೀಡಿ. ಹಿಂದೆ ಬಂಗಾರಪ್ಪ, ಯಡಿಯೂರಪ್ಪ, ಕಾಗೋಡು ಅವರದ್ದು ಹೋರಾಟದ ದಿನಗಳು ಇಂದಿನದ್ದು ಅಭಿವೃದ್ಧಿಯ ದಿನಗಳಾಗಿವೆ. ಕುಡಿಯುವ ನೀರು, ಶರಾವತಿ, ಪಟಗುಪ್ಪೆ ಸೇತುವೆ ಸೇರಿದಂತೆ ರಸ್ತೆ, ರೈಲ್ವೇ ಸಂಪರ್ಕದ ಅಭಿವೃದ್ಧಿಗಾಗಿ ಬಿ.ಜೆ.ಪಿ. ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹೊನಗೋಡು ರತ್ನಾಕರ, ಹಕ್ರೆ ಮಲ್ಲಿಕಾರ್ಜುನ, ಪ್ರಶಾಂತ್, ಕೆರೆಕೈ ಪ್ರಸನ್ನ. ರಾಜನಂದಿನಿ, ಭರ್ಮಪ್ಪ, ಆಚಾಪುರ ಶಾಂತಕುಮಾರ್, ಪಕ್ಷದ ಕಾರ್ಯಕರ್ತರು ಮುಂತಾದವರಿದ್ದರು.
Tags:
ಸಾಗರ ಆನಂದಪುರ ಸುದ್ದಿ