ವಿಜಯ ಸಂಘರ್ಷ
ಕೆ.ಆರ್.ಪೇಟೆ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡರ 92ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಕೆ.ಆರ್ ಪೇಟೆ ಶಾಸಕ ಹೆಚ್.ಟಿ ಮಂಜು ಅವರ ನೇತೃತ್ವದಲ್ಲಿ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಹೊಸಹೊಳಲು ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲಾಯಿತು.
ನಂತರ ಮಾತನಾಡಿದ ಶಾಸಕರು,ದೇಶ ಕಂಡ ಅಪರೂಪದ ಮಾಜಿ ಪ್ರಧಾನಿ ದೇವೇಗೌಡರ ಹುಟ್ಟು ಹಬ್ಬದ ಹಿನ್ನೆಲೆ ತಾಲೂಕು ಸರ್ಕಾರಿ ಆಸ್ಪತ್ರೆ ಹೊರ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ. ಅವರ ಅಧಿಕಾರದ ಅವಧಿಯ ಕಾಲಘಟ್ಟದಲ್ಲಿ ದೇಶದ ರೈತರು, ಕಾರ್ಮಿಕರು, ಸೇರಿದಂತೆ ದುಡಿಯುವ ಶ್ರಮಿಕ ವರ್ಗದ ಪರವಾಗಿ ಸುದೀರ್ಘ ನಿಲ್ಲುವ ಮೂಲಕ ಎಲ್ಲಾ ವರ್ಗದ ಜನತೆ ಸಾಮಾಜಿಕ ನ್ಯಾಯ ಕಲ್ಪಿಸುವಂತಹ ಪರಿಕಲ್ಪ ಹಾಗೂ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಮಹಿಳೆಯರು ಹೀಗೆ ಎಲ್ಲರಿಗೂ ಸಮಾನತೆ ಯಿಂದ ಲಾಭ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆತಂದು. ಈ 92 ವರ್ಷದ ಇಳಿ ವಯಸ್ಸಿನಲ್ಲೂ ದೇಶ ಮತ್ತು ರಾಜ್ಯದ ರೈತರ ದೀನ ದಲಿತರ ಬಗ್ಗೆ ಸದಾ ಚಿಂತಿಸುತ್ತಿರುವ ಏಕೈಕ ಅಪರೂಪದ ರಾಜಕಾರಣಿ ಎಂದರೆ ದೇವೇಗೌಡರು ಇಂತಹ ರಾಜಕಾರಣಿ ಮುಂದಿನ ದಿನಮಾನಗಳಲ್ಲೂ ದೇಶ ಮತ್ತು ರಾಜ್ಯಕ್ಕೆ ಅವರ ಸೇವೆ ಅವಶ್ಯಕತೆ ಇರುವುದರಿಂದ ಆರೋಗ್ಯ ಮತ್ತು ಆಯಸ್ಸು ಭಗವಂತ ಮತ್ತಷ್ಟು ವೃದ್ಧಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ಶಶಿಧರ್,ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್,ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್,ಎಂ.ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್, ಕಾನೂನು ಘಟಕದ ಅಧ್ಯಕ್ಷ ವಿ. ಎಸ್ ಧನಂಜಯ್ ಕುಮಾರ್,ಯುವ ರಾಜ್ಯ ಕಾರ್ಯದರ್ಶಿ ಶೀಳನೆರೆ ದಿನೇಶ್,ಹೋಬಳಿ ಘಟಕದ ಅಧ್ಯಕ್ಷ ಸಂತೆಬಾಚಹಳ್ಳಿ ರವಿ ಕುಮಾರ್, ಬಸವಲಿಂಗಪ್ಪ, ಪುರಸಭಾ ಸದಸ್ಯ ಹೇಮಂತ್ ಕುಮಾರ್, ಗಜ ರವಿ, ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ಹರಿಹರಪುರ ನರಸಿಂಹ,ಗ್ರಾ.ಪಂ ಸದಸ್ಯ ಮಾಕವಳ್ಳಿ ಮಂಜುನಾಥ್, ಯುವ ಮುಖಂಡರಾದ ಶೆಟ್ಟನಾಯ್ಕನಹಳ್ಳಿ ಕೊಪ್ಪಲು ಶೇಖರ್, ಲೇನಿನ್ ಹೌಸ್ ಲೊಕೇಶ್, ಅಗ್ರಹಾರ ಬಾಚಹಳ್ಳಿ ಲೋಕೇಶ್,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ರಾಹುಲ್, ರಾಕೇಶ್, ಶಶಾಂಕ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ ಆರ್ ಪೇಟೆ ವರದಿ