ವಿಜಯ ಸಂಘರ್ಷ
ಸಾಗರ: ವ್ಯಕ್ತಿಯೊರ್ವನಿಂದ ಲಂಚ ಪಡೆಯುವಾಗ ತಾಲೂಕು ಕಚೇರಿಯ ಅಟೆಂಡರ್ ಒಬ್ಬ ಲೋಕಾ ಬಲೆಗೆ ಬಿದ್ದಿದ್ದಾನೆ. ಸಾಗರ ತಾಲೂಕು ಕಚೇರಿಯ ಆರ್.ಆರ್.ಟಿ ಶಾಖೆಯ ಅಟೆಂಡರ್ ಬಸವರಾಜ್ ಲೋಕಾಯುಕ್ತ ಬಲೆಗೆ ಬಿದ್ದಾತ.
ಸಾಗರದ ಬಳಸಗೋಡು ಗ್ರಾಮದಲ್ಲಿ ತೋಹಿದ್ ಅಬ್ದುಲ್ ಎಂಬುವವರಿಗೆ ಸೇರಿದ ಜಮೀನಿನ ಆರ್.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್ ಎಂಬುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್ ಬಸವರಾಜ್ ಅವರ ಆರ್‌ಟಿಸಿಗೆ ಬೇಡಿಕೆ ಇಟ್ಟಿದ್ದರು. ಆಗ ಬಸವರಾಜು 1500 ರೂ. ಹಣ ಪಡೆದಿದ್ದರು. ಅಸೀಬ್ ಅವರ ಸ್ನೇಹಿತ ನವೀನ್ ಎಂಬುವವರು ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದರು. ದಾಖಲೆ ಒದಗಿಸಿದಾಗ ಶಿರಸ್ತೇದಾರ್ ಸಹಿ ಇರಲಿಲ್ಲ. ಇದನ್ನು ಹಾಕಿಸಿಕೊಡಲು 2ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಗುರುವಾರ ಅಟೆಂಡರ್ ಬಸವರಾಜು
2 ಸಾವಿರ ರೂ. ನಗದು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣವನ್ನು ವಶಕ್ಕೆ ಪಡೆದು ಅಟೆಂಡರ್ ಬಸವರಾಜುನನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ.
ಲೋಕಾಯುಕ್ತ ಅಧೀಕ್ಷಕ ಮಂಜುನಾಥ ಚೌದರಿ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲಿಸಿ ದಾಳಿ ನಡೆಸಲಾಗಿದೆ. ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಇನ್ಸ್‌ಪೆಕ್ಟರ್ ಹೆಚ್.ಎಸ್.ಸುರೇಶ್ ಸಿಬ್ಬಂದಿ ಯೋಗೇಶ್, ಸುರೇಂದ್ರ, ಚನ್ನೇಶ, ರಘುನಾಯ್ಕ, ಪುಟ್ಟಮ್ಮ, ಗಂಗಾಧರ, ಪ್ರದೀಪ್, ಜಯಂತ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.