ವಿಜಯ ಸಂಘರ್ಷ
ಶಿವಮೊಗ್ಗ: ಪುಸ್ತಕಗಳು ಜ್ಞಾನ ಭಂಡಾರವನ್ನು ವೃದ್ಧಿಸುವುದರ ಜತೆಗೆ ವ್ಯಕ್ತಿತ್ವ ವಿಕಸನ ವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.
ನಗರದ ಹೊಸಮನೆಯ
ಶ್ರೀವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಮತ್ತು ಪ್ರೊ.ಸತ್ಯ ನಾರಾಯಣ ಅವರ ಕೃತಿ "ಭಾವತರಂಗ" ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈಗಾಗಲೇ ಸಾಕಷ್ಟು ಪುಸ್ತಕಗಳನ್ನ ರಚನೆ ಮಾಡಿರುವ ಪ್ರೊ.ಸತ್ಯ ನಾರಾಯಣ ಅವರ ಸಾಧನೆ ಅನನ್ಯ. ಸಮಾಜಮುಖಿ ಸೇವೆಗಳ ಜತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಕವನಗಳನ್ನ ರಚನೆ ಮಾಡಿ ಇಂದಿಗೂ ಸಹ ವಾಚಿಸುತ್ತಿರುವ ಆಶು ಕವಿಗಳಲ್ಲಿ ಸತ್ಯನಾರಾಯಣ ಒಬ್ಬರು ಎಂದರು.
ಪ್ರತಿಯೊಬ್ಬರೂ ಕಸ ವಿಲೇವಾರಿಯಲ್ಲಿ ಪ್ರಾಮುಖ್ಯತೆ ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸಮರ್ಪಕವಾಗಿ ಕಸ ವಿಲೇವಾರಿ ಮಾಡದೇ ಇದ್ದರೆ ಪರಿಸರಕ್ಕೆ ಇನ್ನಷ್ಟು ತೊಂದರೆ ಯಾಗುತ್ತದೆ. ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಸತ್ಯನಾರಾಯಣ ಮಾತನಾಡಿ, ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರೂ ಸಸಿಗಳನ್ನು ನೆಡುವ ಮೂಲಕ ಪೋಷಣೆ ಮಾಡಬೇಕು. ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಎಲ್ಲರೂ ಮಹತ್ತರ ಪಾತ್ರ ವಹಿಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಟರಿ ಜಿ.ವಿಜಯ್ ಕುಮಾರ್, ನಾಗರಾಜ್ ಅರ್ಕಾಚಾರ್ ಹಾಗೂ ಪ್ರೊ. ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.
ನಾಗರಾಜ್ ಅರ್ಕಾಚಾರ್ ಕಥೆ ಕವನ ವಾಚಿಸಿದರು. ಉಪ ಪ್ರಾಚರ್ಯೆ ಲಕ್ಷ್ಮಿ, ಚುಟುಕು ಸಾಹಿತ್ಯ ಪರಿಷತ್ತಿನ ಖಜಾಂಚಿ ರಮೇಶ್ ಕೌಟೇಕರ್, ಅಕ್ಷತಾ ನಿಶ್ಚಿತ, ಡಾ. ರಾಜಶೇಖರಯ್ಯ, ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.