ವಿಜಯ ಸಂಘರ್ಷ
ಭದ್ರಾವತಿ: ವಿಧಾನ ಪರಿಷತ್ನ ನೈರುತ್ಯ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಪದವಿಧರ, ಶಿಕ್ಷಕರು ಉತ್ಸುಕತೆ ಯಿಂದ ಮತದಾನ ಮಾಡಿದ್ದಾರೆ. ಜಿಲ್ಲೆಯ ಭದ್ರಾವತಿಯಲ್ಲಿ ಚುರುಕಿನ ವೋಟಿಂಗ್ ನಡೆದು ಮತದಾರರು ಬೆಳಗ್ಗೆ ಮತಗಟ್ಟೆಗಳತ್ತ ತೆರಳಿ ಸರದಿ ಸಾಲಿನಲ್ಲಿ ನಿಂತು ಶಾಂತಿಯುತ ವಾಗಿ ಮತದಾನ ಮಾಡಿದ್ದಾರೆ.
ಮಧ್ಯಾಹ್ನದ ವೇಳೆಗೆ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿ ಭದ್ರಾವತಿ ತಾಲ್ಲೂಕು ಕಚೇರಿ ಸಮೀಪದ ಮತಗಟ್ಟೆಗೆ ಆಗಮಿಸಿ ಮಾತನಾಡಿದ ಅವರು, ಇದು ಕಾರ್ಯಕರ್ತರ ಚುನಾವಣೆಯಾಗಿದೆ. ನಮ್ಮ ಕ್ಷೇತ್ರದ ಎಲ್ಲಾ ಕಡೆ ಉತ್ತಮವಾದ ಮತದಾನ ನಡೆಯುತ್ತಿದೆ. ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ. ಇದು ಕಾರ್ಯಕರ್ತರ ಗೆಲುವಾಗಲಿದೆ.
ಮತದಾರರು ಬುದ್ಧಿವಂತರಿದ್ದಾರೆ. ನಾನು ಅದೇ ರೀತಿ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಅವರು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.