ಲೋಕಾರ್ಪಣೆಗೊಂಡ ಆನಂದಪುರದ ನೂತನ ಗ್ರಾ.ಪಂ.ಕಟ್ಟಡ

ವಿಜಯ ಸಂಘರ್ಷ 
ಸಾಗರ(ಆನಂದಪುರ): ಸಾರ್ವಜನಿಕ ರಿಗೆ ಇನ್ನಷ್ಟು ಉತ್ತಮವಾದ ಸೇವೆ ಸಲ್ಲಿಸುವ ಹಾಗೂ ಗ್ರಾಮದ ಸರ್ವಾಂಗೀಣ ಪ್ರಗತಿಯ ಬಗ್ಗೆ ಗ್ರಾಮಾಡಳಿತ ಸದಾ ಕಂಕಣಬದ್ಧ ವಾಗಿದೆ. ರಸ್ತೆ ಬದಿಯಲ್ಲಿ ತಿನಿಸುಗಳನ್ನು ಮಾರುವವರಿಗೆ ಹಾಗೂ ಸಾರ್ವಜನಿಕ ರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಫುಡ್ ಕೋರ್ಟ್ ಅನ್ನು ನಿರ್ಮಿಸುವ ಉದ್ದೇಶವನ್ನಿಟ್ಟು ಕೊಂಡಿದ್ದು ಮುಂದಿನ ದಿನಗಳಲ್ಲಿ ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್ ಎಸ್. ಹೇಳಿದರು.

ಅವರು ಆನಂದಪುರದ ಗ್ರಾಮ ಪಂಚಾಯತಿ ನೂತನ ಕಟ್ಟಡ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮದ ಎಲ್ಲಾ ರಸ್ತೆಗಳ ಇಕ್ಕೆಲಗಳಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುವುದು. ಆನಂದಪುರ ಪಂಚಾಯತಿಯನ್ನು ಭೌತಿಕ, ಆಡಳಿತಾತ್ಮಕ ಹಾಗೂ ಜನೋಪಯೋಗಿ ಕಾರ್ಯಗಳ ಮೂಲಕ ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಲಾಗು ವುದು. ಹಿಂದಿನ ಕಟ್ಟಡವನ್ನು ಡಿಜಿಟಲ್ ಲೈಬ್ರರಿಯನ್ನಾಗಿ ಪರಿವರ್ತಿಸುವ ಯೋಜನೆ ಇದೆ ಎಂದರು.

ಪ್ರಾರಂಭದಿoದ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಪ್ರಧಾನರು, ಅಧ್ಯಕ್ಷ,ಸದಸ್ಯ, ಆಡಳಿತಾಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಅವರೆಲ್ಲರ ಪರಿಶ್ರಮದ ಹಾಗೂ ಗ್ರಾಮಸ್ಥರ ಸಹಕಾರ ದಿಂದಾಗಿ ಇಂದು ಹೊಸ ಕಟ್ಟಡ ನಿರ್ಮಾಣಕ್ಕೆ ನಾಂದಿಯಾಗಿದೆ ಎಂದರು.  

ಕಾರ್ಯಕ್ರಮದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ರೂಪಕಲಾ, ಎಲ್ಲಾ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು.

“ ನೂತನ ಗ್ರಾಮಪಂಚಾಯತಿ ಕಟ್ಟಡವು ಮಿನಿ ವಿಧಾನ ಸೌಧದ ರೀತಿಇದ್ದು ಸಕಲ ಆಡಳಿತ ಸೌಲಭ್ಯವು ಸಾರ್ವಜನಿಕರಿಗೆ ವಿಳಂಬವಿಲ್ಲದೇ ದೊರೆಯುವಂತೆ ಆಗಲಿ. ರಾಜ್ಯ ಸರ್ಕಾರದ ಅನುದಾನವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಗ್ರಾಮದಲ್ಲಿ ಸ್ವಚ್ಛತೆ, ಆರೋಗ್ಯ ನೈರ್ಮಲ್ಯತೆಗೆ ಆದ್ಯತೆಯನ್ನು ನೀಡಲಿ. ಹೊಸ ಕಟ್ಟಡದ ಮೇಲ್ಭಾಗದಲ್ಲಿ ಸಭಾಂಗಣ ನಿರ್ಮಿಸಲು ೧೫ ಲಕ್ಷ ರೂಗಳನ್ನು ಅನುದಾನ ನೀಡಲಾಗುವುದು.” 
ಬೇಳೂರು ಗೋಪಾಲಕೃಷ್ಣ , ಶಾಸಕರು., 

“ ಆನಂದಪುರದ ಹೆದ್ದಾರಿಯನ್ನು ಅಗಲೀಕರಿಸಿ ಡಿವೈಡರ್‌ನ್ನು ಅಳವಡಿಸಬೇಕು. ಗಾಣಿಗನಕೆರೆಯನ್ನು ಸ್ವಚ್ಛಗೊಳಿಸಿ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಹಾಗೂ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಪರಿವರ್ತಿಸ ಬೇಕಿದೆ.” 
ಗ್ರಾಮಸ್ಥರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು