ಎಂಪಿಎಂ ಅರಣ್ಯ ಭೂಮಿಯ ಗುತ್ತಿಗೆ ಅವಧಿ ವಿಸ್ತರಿಸಲು ಕೇಂದ್ರ ಸಚಿವರಲ್ಲಿ ಮನವಿ

ವಿಜಯ ಸಂಘರ್ಷ 
ಭದ್ರಾವತಿ: ನಗರದ ಎಂಪಿಎಂ. ಕಾರ್ಖಾನೆಯ ಅರಣ್ಯ ಪ್ರದೇಶದ ಕುರಿತು ಸಂಸದ ಬಿ.ವೈ. ರಾಘವೇಂದ್ರ ರವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಸಚಿವ ಭೂಪೇಂದ್ರ ಯಾದವರವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಭದ್ರಾವತಿ ಎಂಪಿಎಂ ಕಾರ್ಖಾನೆಗೆ ನೀಡಲಾದ 49413.40 ಎಕರೆ (20,005.42 ಹೆಕ್ಟೇರ್) ಪ್ರದೇಶದ ಅರಣ್ಯ ಭೂಮಿಯ ಗುತ್ತಿಗೆ ಅವಧಿಯನ್ನು 11.08.2020 ರಿಂದ 40 ವರ್ಷಗಳ ಅವಧಿಗೆ 1980 ರ ಅರಣ್ಯ ಸಂರಕ್ಷಣಾ ಕಾಯ್ದೆಯ ಅನ್ವಯ ವಿಸ್ತರಿಸಿ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಆದೇಶಕ್ಕೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಆಕ್ಷೇಪ ವ್ಯಕ್ತ ಪಡಿಸಿರುವುದನ್ನು ಹಿಂಪಡೆದು ಎಂ.ಪಿ.ಎಂ. ಕಾರ್ಖಾನೆಯ ಬಂದಿತ ತಿರುಳಿನ ತೋಟ ಗಳನ್ನು ಬೆಳೆಸುವ ಹಾಗು ನಿರ್ವಹಣೆಯ ಯೋಜನೆಗೆ ಅನುಮೋದನೆ ದೊರಕಿಸಿ ಕೊಡಲು ಕೋರಿದರು.

ಸಂಸದರ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಅಧಿಕಾರಿಗಳಿಗೆ ಎಂ.ಪಿ.ಎಂ.ಕಾರ್ಖಾನೆಯ ನಿರ್ವಹಣೆ ಮತ್ತು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಕಾರ್ಖಾನೆಯ ಬಂದಿತ ತಿರುಳಿನ ತೋಟ ಗಳನ್ನು ಬೆಳೆಸುವ ಹಾಗು ನಿರ್ವಹಣೆಯ ಯೋಜನೆಗೆ ಅನುಮೋದನೆ ನೀಡಲು ಸೂಚಿಸಿದರು. 

ಕಾರ್ಖಾನೆಯ ನಿರ್ವಹಣೆಯ ಯೋಜನೆಗೆ ಅನುಮತಿ ನೀಡಲು ಕ್ರಮವಹಿಸುವುದಾಗಿ ತಿಳಿಸಿದ ಸಚಿವರಿಗೆ ಕ್ಷೇತ್ರದ ಜನತೆಯ ಪರವಾಗಿ ಸಂಸದ ರಾಘವೇಂದ್ರ ಅಭಿನಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು