ಹಕ್ಕಿ ಪಿಕ್ಕಿ ಜನಾಂಗದ ಬಗ್ಗೆ ಕೀಳಾಗಿ ಮಾತನಾಡಿದ ಲ್ಯಾವಿಗೆರೆಯನ್ನು ಉಚ್ಛಾಟಿಸಲಿ:ಹೊನಗೋಡು

ವಿಜಯ ಸಂಘರ್ಷ 
ಸಾಗರ (ಆನಂದಪುರ): ಹಕ್ಕಿಪಿಕ್ಕಿ ಜನಾಂಗದ ಬಗ್ಗೆ ಬಹಳ ಕೀಳಾಗಿ ಮಾತನಾಡಿರುವ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಲ್ಯಾವಿಗೆರೆ ಸೋಮಶೇಖರ್ ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸ ಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೊನಗೋಡು ರತ್ನಾಕರ ಆಗ್ರಹಿಸಿದರು. 

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸಾಗರ ಕ್ಷೇತ್ರಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಅನೇಕ ಕೊಡುಗೆ ನೀಡಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಹಾಲಪ್ಪ ಸಾಗರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ನಿಯಂತ್ರಣ ಹಾಗೂ ಜನತೆಯ ಆರೋಗ್ಯ ಕಾಳಜಿ ಕುರಿತಾಗಿ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದು ತಪ್ಪು ಎಂದು ಕಾಂಗ್ರೆಸ್ ನವರು ಪತ್ರಿಕಾ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. 

ಪ್ರಸ್ತುತ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಸಾರ್ವಜನಿಕರ ಆರೋಗ್ಯದ ಕಾಳಜಿ ಹಿನ್ನೆಲೆ ಸಾಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು, ಅಧಿಕಾರಿ ಹಾಗೂ ಸಿಬ್ಬಂದಿ ಗಳನ್ನು ಭೇಟಿ ಮಾಡಿದ್ದು ತಪ್ಪು ಎಂಬ ಹಾಲಿ ಶಾಸಕರ ಬೆಂಬಲಿಗರ ವರ್ತನೆ ಸರಿಯಲ್ಲ. ಈಗಿರುವ ತಾಲ್ಲೂಕು ಕಾಂಗ್ರೆಸ್ ಸಮಿತಿಯವರಲ್ಲಿ ಹಲವು ಜನ ವೈಯಕ್ತಿಕ ಲಾಭಕ್ಕಾಗಿ ಹಾಗೂ ಭ್ರಷ್ಟಾಚಾರ ಮಾಡುವುದಕ್ಕಾಗಿಯೇ ಇದ್ದಾರೆ ಎಂದು ಆರೋಪಿಸಿದರು. 

ಹಿಂದಿನ ಸರ್ಕಾರದ ಅನುದಾನಗಳ ಕಾಮಗಾರಿಯಷ್ಟೇ ಈಗ ನದೆಯುತ್ತಿದೆ ಅದು ಬಿಟ್ಟರೆ ಮತ್ಯಾವ ಹೊಸ ಅನುದಾನಗಳು ಬಂದಿಲ್ಲ. ಫ್ರೀ ಗೌವರ್ನಮೆಂಟ್ ನಿಂದ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ತಂದು ನಮ್ಮ ಶಾಸಕರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ ಎಂದು ಆನಂದಪುರ ಗ್ರಾ.ಪಂ. ಅಧ್ಯಕ್ಷ ಮೋಹನ್ ಕುಮಾರ್ ಎಸ್ ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಆನಂದಪುರ ಗ್ರಾ.ಪಂ. ಅಧ್ಯಕ್ಷ ಎಸ್.ಮೋಹನ್‌ ಕುಮಾರ್, ಮುಖಂಡರುಗಳಾದ ಆಚಾಪುರ ಶಾಂತಕುಮಾರ್, ರೇವಪ್ಪ ಹೊಸಕೊಪ್ಪ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು