ಭದ್ರಾ ಜಲಾಶಯ ನೀರಿನ ಮಟ್ಟ 3.9 ಅಡಿ ಏರಿಕೆ:ಇವತ್ತು ಎಷ್ಟಿದೆ ಒಳ ಹರಿವು?

ವಿಜಯ ಸಂಘರ್ಷ 
ಭದ್ರಾವತಿ: ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯಕ್ಕೆ ಉತ್ತಮ ಒಳ ಹರಿವು ಇದೆ. 

ಇಂದು 34,544 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. 169 ಕ್ಯೂಸೆಕ್‌ ಹೊರ ಹರಿವು ಇದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 3.9 ಅಡಿ ಏರಿಕೆಯಾಗಿದೆ.

 ಇವತ್ತು ಜಲಾಶಯದ ನೀರಿನ ಮಟ್ಟ 148.6 ಅಡಿಗೆ ತಲುಪಿದೆ. ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಇವತ್ತು ಕೂಡ ಮಳೆಯಾಗುತ್ತಿದೆ. ಆದ್ದರಿಂದ ಭದ್ರಾ ಜಲಾಶಯಕ್ಕೆ ಉತ್ತಮ ಒಳ ಹರಿವು ಇರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು