ವಿಜಯ ಸಂಘರ್ಷ
ಭದ್ರಾವತಿ: ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಧರ್ಮಗುರು ವಿಲಿಯಂ ವಿನ್ನಿಫ್ರೆಡ್ ದಾಖಲೆ ಪತ್ರಗಳನ್ನು ಕಳವು ಮಾಡಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಕ್ಯಾಥೋಲಿಕ್ ಧರ್ಮಕ್ಷೇತ್ರ ಕ್ರೈಸ್ತರ ಹಿತರಕ್ಷಣಾ ವೇದಿಕೆ ವತಿಯಿಂದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ನಡುವೆ ವಿಲಿಯಂ ವಿನ್ನಿಫ್ರೆಡ್ ರವರು ತಮ್ಮ ಸೇವೆಯ ಅವಧಿಯಲ್ಲಿ ದೇವಾಲಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಕಳವು ಮಾಡಿ ಜೊತೆಯಲ್ಲಿ ಕೊಂಡೊಯ್ದಿರುವುದು ಹಾಗೂ ಅವುಗಳನ್ನು ದುರುಪಯೋಗಪಡಿಸಿ ಕೊಳ್ಳುವುದು ನಮ್ಮ ಗಮನಕ್ಕೆ ಬಂದಿದೆ. ಅಲ್ಲದೆ, ವಿನ್ನಿಫ್ರೆಡ್‌ರವರು ಸರ್ಕಾರದಿಂದ ಬಿಡುಗಡೆಯಾದ ಸುಮಾರು 60 ಲಕ್ಷ ರು. ವೆಚ್ಚದ ದೇವಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿ, ಈ ನಡುವೆ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಧರ್ಮಗುರುಗಳ ಬಗ್ಗೆ ಮತ್ತು ವ್ಯಕ್ತಿಗಳ ಆಧಾರ ರಹಿತ, ಕಲ್ಪಿತ ಮತ್ತು ಮಾನಹಾನಿಯಾಗುವಂತಹ ಸುದ್ದಿಗಳನ್ನು ಯುಟ್ಯೂಬ್ ಚಾನಲ್‌ಗಳಲ್ಲಿ ಸಂದರ್ಶನ ನೀಡುವ ಮೂಲಕ ಭಿತ್ತರಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಕಳವು ಮಾಡಲಾಗಿರುವ ದೇವಾಲಯದ ದಾಖಲೆ ಪತ್ರಗಳನ್ನು ಮರಳಿ ಕೊಡಿಸಿಕೊಡುವಂತೆ ದೂರಿನಲ್ಲಿ ಕೋರಲಾಗಿದೆ.
ಶಿವಮೊಗ್ಗ ಕ್ಯಾಥೋಲಿಕ್ ಧರ್ಮಕ್ಷೇತ್ರ ಕ್ರೈಸ್ತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಂತೋಣಿ ವಿಲ್ಸನ್, ಅಮಲೋದ್ಭವಿ ಮಾತೆ ದೇವಾಲಯದ ಪಾಲನ ಪರಿಷತ್ ಕಾರ್ಯದರ್ಶಿ ವಿಲ್ಸನ್, ಕಾರ್ಮಿಕ ಸಂತ ಜೋಸೆಫರ ದೇವಾಲಯದ ಪಾಲನ ಪರಿಷತ್ ಕಾರ್ಯದರ್ಶಿ ಸೆಲ್ವರಾಜ್, ನಗರಸಭೆ ಸದಸ್ಯ ಜಾರ್ಜ್, ಮಾಜಿ ಸದಸ್ಯ ಫ್ರಾನ್ಸಿಸ್ ಇನ್ನಿತರರು ಉಪಸ್ಥಿತರಿದ್ದರು.
Tags:
ಭದ್ರಾವತಿ ಸುದ್ದಿ