ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಪಕ್ಷ ಮುಗಿಸಲು ಅಸಾಧ್ಯ: ಕೇಂದ್ರ ಸಚಿವ ಹೆಚ್.ಡಿ.ಕುಮಾರ ಸ್ವಾಮಿ

ವಿಜಯ ಸಂಘರ್ಷ 
ಕೆ.ಆರ್.ಪೇಟೆ: ಕಳೆದ ವಿಧಾನಸಭೆ ಯಲ್ಲಿ ಹೊರ ಬಿದ್ದ ಫಲಿತಾಂಶದ ನಂತರ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸಂಪೂರ್ಣ ಮಾಯವಾಗುತ್ತದೆ ಎಂದು ಟೀಕಿಸುತ್ತಿದ್ದ ಕೆಲ ಕಾಂಗ್ರೆಸ್ ನಾಯಕ ರಿಗೆ ಜೆಡಿಎಸ್ ಕಾರ್ಯಕರ್ತರ ಪಕ್ಷ ಮುಗಿಸಲು ಅಸಾಧ್ಯ ಎಂದು ಈ ದಿನ ಸಾಕ್ಷಿಯಾಗಿ ರಾಜ್ಯ ಮತ್ತು ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಚಿಂತಿಸುತ್ತಿರುವುದಕ್ಕೆ ಕಾಂಗ್ರೆಸ್ ಪಕ್ಷ ನಿದ್ದೆಗೆಡುತ್ತಿದೆ ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ನೂತನ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಪುರಸಭಾ ಆವರಣದಲ್ಲಿ ಭಾನುವಾರ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಆಯೋಜಿಸಿದ ಬೃಹತ್ ಕೃತಜ್ಞತಾ ಮತ್ತುಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಮಾಜಿ ಪ್ರದಾನಿ ಹೆಚ್.ಡಿ ದೇವೇಗೌಡರ ಆಡಳಿತ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ, ಹಾಗೂ ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಒಂದು ಜವಾಬ್ದಾರಿ ಸ್ಥಾನಕ್ಕೆ ಹೋಗಲು ಮಂಡ್ಯ ಜಿಲ್ಲೆಯ ಜನ ನನಗೆ ಆಶೀರ್ವದಿಸಿದ್ದೀರಿ ಆ ವಿಶ್ವಾಸಕ್ಕೆ ಋಣಿಯಾಗಿ ಕಾರ್ಯನಿರ್ವಹಿಸುತ್ತೇನೆ ಆದರೆ ನನಗೆ ಸ್ವಲ್ಪ ಕಾಲಾವಕಾಶ ಕೋಡಬೇಕು. ಸರ್ಪಪಕ್ಷ ಸಭೆಗೆ ಆಹ್ವಾನ ನೀಡಿದರು ಸಭೆಗೆ ಆಗಮಿಸಿದೆ ಬಾಡೂಟವೆ ಹೆಚ್ಚಾಯ್ತು ಎಂದು ಟೀಕೆ ಟಿಪ್ಪಣಿ ಮಾಡು ತ್ತಿರುವ ಕಾಂಗ್ರೆಸ್ ಮುಖಂಡರು ಭಾನುವಾರ ಸರ್ವಪಕ್ಷ ಸಭೆಗೆ ನನ್ನನ್ನು ಕರೆದರು.ಅದಕ್ಕೂ ಮೊದಲೇ ಅಂದರೆ ಶನಿವಾರ ಹಿಂದಿನ ದಿನವೇ 8,000 ಸಾವಿರ ಕ್ಯೂಸಿಕ್ ನೀರನ್ನು ತಮಿಳುನಾಡಿಗೆ ಹರಿಸಿ ಸಭೆಗೆ ನನ್ನ ಕರೆದ ಔಚಿತ್ಯವಾದರು ಏನು?. ನನಗೆ ಮೂರನೇ ಬಾರಿ ಹೃದಯ ಚಿಕಿತ್ಸೆಯ ನಂತರ ಮಾಂಸಹಾರ ಬಿಟ್ಟಿದ್ದೇನೆ. ನಮ್ಮ ನೆಂಟರನ್ನು ಕರೆದು ಒಂದು ಬಾಡೂಟ ಹಾಕೋದು ನಮ್ಮ ಸಂಸ್ಕೃತಿ ಒಂದು ಸಂಪ್ರದಾಯ ಅದನ್ನ ಶಾಸಕರು ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಆಕಾಂಕ್ಷಿತನಾಗಿರಲಿಲ್ಲ ಕೊನೆಗೆ ಮಂಡ್ಯ ಜಿಲ್ಲೆಯ ಎಲ್ಲಾ ನಾಯಕರು ನನ್ನನ್ನೇ ಅಭ್ಯರ್ಥಿ ಮಾಡಬೇಕೆನ್ನು ಒತ್ತಾಯದ ಮೇರೆಗೆ ಸ್ಪರ್ಧೆ ಮಾಡಿದೆ ಹಾಗೂ ಜಿಲ್ಲೆ ಯಲ್ಲಿ ಜೆಡಿಎಸ್,ಕಾಂಗ್ರೆಸ್, ಬಿಜೆಪಿ, ಸೇರಿದಂತೆ ಎಲ್ಲಾ ಪಕ್ಷದ ಕಾರ್ಯ ಕರ್ತರು ಕೂಡ ಪಕ್ಷಾತೀತವಾಗಿ ಹಿರಿಯರು ನನಗೆ ಆಶೀರ್ವಾದ ನೀಡಿದ ಫಲವಾಗಿ ಕೇಂದ್ರ ಸರ್ಕಾರದಲ್ಲಿ ನನಗೆ ಎರಡು ಬೃಹತ್ ಖಾತೆಗಳ ಜೊತೆಗೆ ಎಕನಾಮಿಕ್ ಕಮಿಟಿ ಹಾಗೂ ನೀತಿ ಆಯೋಗದ ಸದಸ್ಯನ್ನನ್ನಾಗಿ ಸಹ ಪ್ರಧಾನಿ ನರೇಂದ್ರಮೋದಿ ಮಾಡಿರು ವುದು ಜಿಲ್ಲೆಯ ಜನರಿಗೆ ಕೊಟ್ಟ ಗೌರವ.ಆದರೆ ರಾಜ್ಯ ಮತ್ತು ಜಿಲ್ಲೆಯ ಜನತೆ ನನಗೆ ಕೆಲಸ ಮಾಡಲು ಕಾಲಾವಕಾಶ ಕೊಡಿ ನುಡಿದಂತೆ ನಡೆದುಕೊಳ್ಳುತ್ತೇನೆ. 

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸಂಪೂರ್ಣ ಬಂದ್ ಮಾಡಿದ್ದಾರೆ ನಮ್ಮ ಮಂಡ್ಯ ಜಿಲ್ಲೆಯ ಸಾವಿರಾರು ಕುಟುಂಬಗಳು ಭದ್ರಾವತಿಯಲ್ಲಿ ನೆಲೆಸಿದ್ದಾರೆ. ಆ ಕಾರ್ಖಾನೆಯ ಪುನಃಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಖಾನೆಗೆ ಭೇಟಿ ನೀಡಿ ಮರುಜೀವ ಕೊಟ್ಟು ಪ್ರಾರಂಭ ಮಾಡುವ ಯೋಜನೆ ಕೈ ಹಾಕುತ್ತಿದ್ದೇನೆ ಹಾಗೂ ಎಚ್,ಎಂ,ಟಿ ಕಾರ್ಖಾನೆಯನ್ನು ಸಹ ಪುನಶ್ಚೇತನ ಮಾಡುವ ಕಾರ್ಯಕ್ರಮ ಸಹ ಹಮ್ಮಿಕೊಂಡಿದ್ದೇನೆ. ಯುವ ಸಮುದಾಯಕ್ಕೆ ಉದ್ಯೋಗವನ್ನು ದೊರಕಿಸುವ ಕಾರ್ಖಾನೆ ತರುವ ಪ್ರಯತ್ನ ಮಾದರಿಯಲ್ಲೆ ಕೆ.ಆರ್.ಪೇಟೆ ತಾಲ್ಲೂಕಿಗೆ ಸಹ 3-4 ಸಣ್ಣ ಪುಟ್ಟ ಕಾರ್ಖಾನೆ ತರಲು ಪ್ರಯತ್ನಿಸುತ್ತೇನೆ. ಮಂಡ್ಯ ಜನರ ಕಷ್ಟ -ಸುಖ ಕೇಳಲು ಮಂಡ್ಯದಲ್ಲಿ ಜನಸ್ಪಂದನ-ಸಭೆ ಮಾಡಿದರೆ ಕುಮಾರಸ್ವಾಮಿ ಜನಸ್ಪಂದನೆಯಾಗಿ ಕಾರ್ಯನಿರ್ವಹಿ ಸುತ್ತೇನೆ ಎಂದು ಕಾಂಗ್ರೆಸ್ ಸರ್ಕಾರ ಸಭೆಗೆ ಯಾವುದೇ ಅಧಿಕಾರಿ ಹೋಗದಂತೆ ಸುತ್ತೊಲೆ ಹೊರಡಿಸಿ ಜನರ ಸ್ಪಂದನೆಗೆ ಅವಕಾಶ ನೀಡಲಿಲ್ಲ ಆದರೂ ಜನರ ಅಭಿವೃದ್ಧಿ ಕಾರ್ಯಕ್ಕೆ ಸದಾ ನಿಲ್ಲುತ್ತೇನೆ. ಈ ದೇಶದಲ್ಲಿ ನೀರಾವರಿ ಬಗ್ಗೆ ಸಂಪೂರ್ಣ ತಿಳಿದಿರುವಂತ ವ್ಯಕ್ತಿ ಅದು ನೀವು ಬೆಳೆಸಿರುವಂತ ದೇವೇಗೌಡ ನಿಮ್ಮಿಂದ ಉಳಿದ ಜನತಾದಳ ಪಕ್ಷ ಅದರಲ್ಲೂ ಮಂಡ್ಯ ಜಿಲ್ಲೆಯ ಸಂಸದರಾದರು ಮಂಡ್ಯ ಬರಬಾರದಂತೆ ಹಾಗೂ ನೆರೆ ಹಾವಳಿ ಪ್ರದೇಶಕ್ಕೆ ಹೋಗಿ ಸಾಂತ್ವಾನ ಹೇಳಿದ್ರೆ ಆ ಪ್ರದೇಶಕ್ಕೆ ಕುಮಾರಸ್ವಾಮಿ ಯಾಕೆ ಎನ್ನುತ್ತಾರೆ ಅವರ ಕಷ್ಟ-ಸುಖ ವನ್ನು ಕೇಳಬಾರದಂತೆ. ಎಸ್‌.ಸಿ ಮತ್ತು ಎಸ್.ಟಿ, ಹಿಂದುಳಿದ ವರ್ಗಗಳ ಹಣವನ್ನು ಈ ದರಿದ್ರ ಕಾಂಗ್ರೆಸ್ ಸರ್ಕಾರ ನುಂಗಿ ಸುಮಾರು 8-10 ತಿಂಗಳಿಂದ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ 50 ಎಂ ಎಲ್ ಹಾಲು ಜಾಸ್ತಿ ಮಾಡಿ 2 ರೂ ಜಾಸ್ತಿ ಮಾಡಿದ್ದು ರೈತರಿಗೆ ಏನೂ ಕೊಟ್ಟಿಲ್ಲಾ.ನಮ್ಮ ಕಾಲದಲ್ಲಿ ರೈತರು ಒಂದು ಟಿ.ಸಿ ಹಾಕಬೇಕು ನಮ್ಮ ಸರ್ಕಾರದಲ್ಲಿ 25000 ಖರ್ಚಾಗುತ್ತಿತ್ತು ಪ್ರಸ್ತುತ ಸರ್ಕಾರದಲ್ಲಿ ಎರಡುವರೆ ಲಕ್ಷ ಖರ್ಚಾಗುತ್ತದೆ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಮಾಡಿದ ಕಾಂಗ್ರೆಸ್ ಸರ್ಕಾರದ ಗ್ಯಾರoಟಿ ಯೋಜನೆ ಮೂಲಕ ಹಣಕೊಟ್ಟು ಮಧ್ಯದ ಮೂಲಕ ಹಣ ಕಿತ್ತುಕೊಳ್ಳುತ್ತದೆ. 

ನಾನು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಎಲ್ಲಾ ರೀತಿಯ ಲಾಟರಿ, ಸಾರಾಯಿ ಎಲ್ಲ ಸಂಪೂರ್ಣ ನಿಷೇಧ ಮಾಡಿದೆ. ಆದರೆ ರಾಜ್ಯದ ಜನರ ಹಣದ ತೆರಿಗೆಯ ಹಣವನ್ನು ಪ್ರಸ್ತುತ ಸರ್ಕಾರ ಲೂಟಿ ಮಾಡುತ್ತ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಯಾಗುತ್ತಿಲ್ಲ. ಸರ್ಕಾರದ ಸಚಿವರು ದುಡ್ಡು ಮಾಡುವ ಪ್ರತಿ ಸ್ಪರ್ಧೆಗೆ ಮಂತ್ರಿಗಳು ಮುಗಿಬೀಳು ತ್ತಿದ್ದಾರೆ. ಕಾಂಗ್ರೇಸ್ ನವರು ಮಾಡಿರುವ ಹಗರಣವನ್ನು ಮುಚ್ಚಿ ಕೊಳ್ಳಲು ಹಳೆಯ ಹೊಸ 21 ಪ್ರಕರಣ ಗಳನ್ನು ಸೃಷ್ಟಿಸಿ ಕೆದಕುತ್ತಿದ್ದಾರೆ. ಈ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ತರುತ್ತೇನೆ. ಈ ಸರ್ಕಾರ ಯಾವ ರೀತಿ ಸಹಕಾರ ನೀಡುತ್ತದೆ ಅದರ ಮೇಲೆ ಅಭಿವೃದ್ಧಿ ಕಾರ್ಯವನ್ನು ನೀವು ನೀಡಿರುವ ಶಕ್ತಿಯನ್ನು ಈ ನಾಡಿನ ಜನತೆಗೆ ಅಭಿವೃದ್ಧಿ ಮೂಲಕ ಮಾಡಿ ತೋರಿಸುತ್ತೇನೆ. ಶ್ರೀರಂಗಪಟ್ಟಣ-ಅರಸಿಕೆರೆ ಮುಖ್ಯರಸ್ತೆ ಅಭಿವೃದ್ಧಿ ಹಾಗೂ ರೈಲ್ವೆ ಮಾರ್ಗದ ಬಗ್ಗೆ ಗಡ್ಕರಿ ಯವರೊಡನೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅಗತ್ಯಕ್ರಮ ವಹಿಸುತ್ತೇನೆ. ಈ ಜಿಲ್ಲೆಗೆ ದೇಶಕ್ಕೆ ಅಭಿವೃದ್ಧಿ ಕೆಲಸ ಗಳನ್ನು ಮಾಡುವುದರ ಜೊತೆಗೆ ನಿಮ್ಮ ಋಣವನ್ನು ತೀರಿಸುವ ಕೆಲಸವನ್ನು ಮಾಡುತ್ತೇನೆ. ನಿಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೆನೆ ಎಂದರು.

ಶಾಸಕ ಹೆಚ್.ಟಿ.ಮಂಜು ಪ್ರಾಸ್ತಾವಿಕ ನುಡಿಗಳನ್ನಾಡಿ ಕುಮಾರಣ್ಣ ತಮ್ಮ ಜನಪರ ಕಾರ್ಯಕ್ರಮಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಜನತಾದರ್ಶನ, ಗ್ರಾಮ ವಾಸ್ತವ್ಯ, ಲಾಟರಿ ನಿಷೇದ, ಮುಂತಾದ ಕಾರ್ಯಕ್ರಮಗಳು ಮೋದಿಯವರ ಮನಸ್ಸನ್ನು ಗೆದ್ದಿವೆ. ಆದ್ದರಿಂದ ಮೋದಿಯವರು ಕುಮಾರಣ್ಣನನ್ನು ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸಿ ದ್ದಾರೆ. ತಾಲ್ಲೂಕಿನಲ್ಲಿ ಹಾದುಹೋಗಿ ರುವ ಶ್ರೀರಂಗಪಟ್ಟಣ ಅರಸೀಕೆರೆ ವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಅಭಿವೃದ್ದಿ ಪಡಿಸಬೇಕು. 

ಪಾಂಡವಪುರದಿಂದ-ಚನ್ನರಾಯ ಪಟ್ಟಣ ವರೆಗೆ ರೈಲ್ವೆ ಮಾರ್ಗ ನಿರ್ಮಾಣ ಮಾಡುವುದು, ಕಬ್ಬು ಕೂಡ ತೋಟಗಾರಿಕಾ ಬೆಳೆಯಾಗಿದ್ದು ಕಬ್ಬು ಬೆಳೆಗಾರರನ್ನು ನರೇಗಾ ಯೋಜನೆಯ ವ್ಯಾಪ್ತಿಗೆ ತರಬೇಕು. ತಾಲ್ಲೂಕಿನ ಐದು ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದಿಮೆಗಳ ಸ್ಥಾಪನೆಗೆ ಕ್ರಮವಹಿಸಬೇಕು. ಈಗಾಗಳೆ 2-3 ಕಡೆಗಳಲ್ಲಿ ಜಮೀನನ್ನು ಮೀಸಲಾಗಿಡ ಲಾಗಿದೆ. ತಾಲ್ಲೂಕಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅವುಗಳನ್ನು ರಿಪೇರಿ ಮಾಡಿಸಿ ಕೊಡುವಂತೆ ಮನವಿ ಮಾಡಿ, ಕುಮಾರಣ್ಣ ನವರಿಗೆ ಮನವಿ ನೀಡಿದ 1-2 ದಿನಗಳಲ್ಲಿ ರೈಲ್ವೆ ಹಿರಿಯ ಅಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ಮೇಲ್ಸೇತುವೆ, ಮತ್ತು ಅಂಡರ್‌ ಪಾಸ್ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ ಮಾಡಿಸಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.

ಮಾಜಿ ಸಚಿವ ಡಾ: ಕೆ.ಸಿ.ನಾರಾಯಣ ಗೌಡ ಕೆ.ಆರ್.ಪೇಟೆ ತಾಲೂಕಿನಲ್ಲಿ 1.800 ಕೋಟಿ ರೂಪಾಯಿಗಳ ಅನುದಾನವನ್ನು ತಂದಿದ್ದೇನೆ. ಕಾಂಗ್ರೆಸ್ ಅನುದಾನಗಳಲ್ಲ. ಜಲಜೀವನ್ ಮಿಷನ್, ತಾಯಿ ಮಗು ಆಸ್ಪತ್ರೆ, ಏತ ನೀರಾವರಿ ಯೋಜನೆ ಗಳು, ರಸ್ತೆಗಳು ಇವುಗಳನ್ನೆಲ್ಲಾ ತಂದವರು ಯಾರು? ನಾರಾಯಣಗೌಡ ಸಚಿವನಾಗಿ ತಂದಿರುವುದು. ಇಡಿ ಮಂಡ್ಯ ಜಿಲ್ಲೆಗೆ ಬಿಜೆಪಿ-ಜೆಡಿಎಸ್ ಪಕ್ಷದಿಂದ ಗೆದ್ದಿರುವುದು ನಮ್ಮ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಒಬ್ಬರೆ. ಅವರಿಗೆ ಎಲ್ಲಾ ರೀತಿಯಲ್ಲಿಯೂ ನಮ್ಮ ಸಹಕಾರವಿದೆ. ಕಾಂಗ್ರೆಸ್ ಪಕ್ಷದವರು ಪಕ್ಷ ರಾಜಕಾರಣವನ್ನು ಬಿಟ್ಟು ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಸಹಕಾರವನ್ನು ನೀಡಿ. ಮಂಡ್ಯ ಜಿಲ್ಲೆಯನ್ನು ಇಂಡಿಯಾ ತಿರುಗಿ ನೋಡುವಂತೆ ಕುಮಾರಣ್ಣ ಮಾಡಿದ್ದಾರೆ. ನೀವು ಏನೆ ಕುತಂತ್ರ ಮಾಡಿದರೂ ಕೂಡಾ ಕುಮಾರಣ್ಣ ನವರನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಯವರನ್ನು ಪಟ್ಟಣದ ಹೊರವಲಯದ ದೇವೇಗೌಡ ಅಭಿಮಾನಿ ಬಳಗದ ಕಛೇರಿಯ ಬಳಿಯಿಂದ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಹತ್ತುವ ಮುನ್ನ ಕುಮಾರಸ್ವಾಮಿ ಯವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿ ಸುವ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ಎಸ್.ಪಿ.ಸ್ವಾಮಿ ಮುಂತಾದವರು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ. ಮಹೇಶ್,ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ, ಶೀಳನೆರೆ ಮೋಹನ್, ಮನ್ಮುಲ್ ನಿರ್ದೇಶಕ ರಾಮಚಂದ್ರ,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿ. ಪಂ ಮಾಜಿ ಸದಸ್ಯ ಚೀನುಕುರುಳಿ ಅಶೋಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್,ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸ ಹೊಳಲು ಅಶೋಕ್, ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮನ್ಮುಲ್ ಮಾಜಿ ಅಧ್ಯಕ್ಷ ಹರೀಶ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆನೆಗೋಳ ಬಿ.ಎಂ ಕಿರಣ್, ಮೂಡ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ್, ಮಾಜಿ ನಿರ್ದೇಶಕ ನಲ್ಲೀಗೆರೆ ಬಾಲು,ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಚನ್ನರಾಯ ಪಟ್ಟಣ ಜೆಡಿಎಸ್ ಅಧ್ಯಕ್ಷ ಬರಗೂರು ಮಂಜೇಗೌಡ, ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಬೂಕನಕೆರೆ ಹುಲ್ಲೆಗೌಡ,ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಬಲದೇವ್, ಮಂಜುನಾಥ್, ಕೊರಟಿಗೆರೆ ದಿನೇಶ್,ಮಾಜಿ ನಿರ್ದೇಶಕ ಹೆಚ್.ಟಿ ಲೋಕೇಶ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್,ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಿಕ್ಕೇರಿ ಶೇಖರ್,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಪ್ರದೀಪ್, ಕುಮಾರಸ್ವಾಮೀ ಸೇರಿದಂತೆ ಸಾಗರದಂತಹ ಸಾವಿರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

*✍️ಸುದ್ದಿಯೊಂದಿಗೆ ಮನು ಮಕಾವಳ್ಳಿ 
ಕೆ.ಆರ್.ಪೇಟೆ*

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು