ಬಸ್-ಕಾರು ಡಿಕ್ಕಿ: ಕ್ರೈಸ್ತಧರ್ಮ ಗುರುಗಳು ಸ್ಥಳದಲ್ಲಿಯೇ ಸಾವು!

ವಿಜಯ ಸಂಘರ್ಷ 
ಶಿವಮೊಗ್ಗ: ದಾವಣಗೆರೆ ಜಿಲ್ಲೆ ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಶಿವಮೊಗ್ಗ ದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿಯಾಗಿದೆ. 

ದಾರಿಯಲ್ಲಿ ಅಡ್ಡಬಂದ ಎಮ್ಮೆ ಯೊಂದನ್ನ ತಪ್ಪಿಸಲು ಹೋದ ಕೆಎಸ್‌ಆರ್‌ಟಿಸಿ ಬಸ್‌ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಪಲ್ಟಿ ಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಫಾದರ್ ಆಂಥೋಣಿ ಪೀಟರ್ ಸಾವು ಕಂಡಿದ್ದಾರೆ. 

ಸಂತಾಪ:- ಭದ್ರಾವತಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್, ಸದಸ್ಯರು, ಪದಾಧಿಕಾರಿಗಳು, ನಗರಸಭಾ ಮಾಜಿ ಸದಸ್ಯ ಫ್ರಾನ್ಸಿಸ್ ಲೋಬೊ, ಕಾಂಗ್ರೆಸ್ ಮುಖಂಡ ಅಂಥೋಣಿ ವಿಲ್ಸನ್ ಸೇರಿದಂತೆ ವಿವಿಧ ಕ್ರೈಸ್ತ ಸಮುದಾಯದ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು