ಕಳಪೆ ಕಾಮಗಾರಿಗೆ ಸಾಕ್ಷಿಯಾದ ರಸ್ತೆ ಗುಂಡಿಗಳು

ವಿಜಯ ಸಂಘರ್ಷ 
ಭದ್ರಾವತಿ: ನಗರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ಒಂದು ವರ್ಷದ ಹಿಂದೆ ಮಾಡಿ ಮುಗಿಸಿದ ರಸ್ತೆ ಡಾಂಬರೀಕರಣದ ಅಸಲೀ ಮತ್ತು ತೆರೆದು ಕೊಂಡು ಎಲ್ಲೆಂದರಲ್ಲಿ ಗುಂಡಿಗಳು ಬಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ಕಳೆದ ವರ್ಷ ಡಾಂಬರೀಕರಣ ಮಾಡಿ ಅಭಿವೃದ್ಧಿ ಪಡಿಸಲಾಗಿದ್ದ ನಗರದ ಅಂಡರ್ ಬ್ರಿಡ್ಜ್ ರೈಲ್ವೇ ಮೇಲ್ಸುತುವೆ ಕೆಳಭಾಗದ ತಿರುವಿನಲ್ಲಿ ದೊಡ್ಡ ಗುಂಡಿ ಬಿದ್ದಿದ್ದರೆ, ಅದರ ಪಕ್ಕದಲ್ಲೇ ಉಂಬೈಬೈಲು ರಸ್ತೆಗೆ ಹಾದುಹೋಗುವ ರಸ್ತೆಯಲ್ಲಿ ಮತ್ತೊಂದು ದೊಡ್ಡ ಗಾತ್ರದ ಗುಂಡಿ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಯಾಗುತ್ತಿದೆ. 

ಗುಂಡಿಗಳಲ್ಲಿ ಇಳಿದ ವಾಹನಗಳ ಸಂಚಾರ ದಿಂದಾಗಿ ದಾರಿ ಹೋಕರಿಗೆ ಗುಂಡಿಯ ಕೆಸರು ನೀರಿನ ಅಭಿಷೇಕ ನಿತ್ಯ ಕಾಣು ವಂತಾಗಿದೆ.ಅಧಿಕಾರಿಗಳು ಈ ಗುಂಡಿಗಳಿಗೆ ಜೆಲ್ಲಿ ಕಲ್ಲು ಗಳನ್ನು ಹಾಕಿದ್ದರೂ ಪ್ರಯೋಜನವಾಗದೆ ಪಕ್ಕದಲ್ಲಿಯೇ ಹೊಸ ಗುಂಡಿಗಳು ತೆರೆದುಕೊಳ್ಳಲು ಕಾರಣವಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು