ವಿಜಯ ಸಂಘರ್ಷ
ಹೊಸನಗರ: ಚಲಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿಬಿದ್ದ ಘಟನೆ ತಾಲೂಕಿನ ಸಂಪೆಕಟ್ಟೆ-ನಿಟ್ಟೂರು ಮಾರ್ಗದಲ್ಲಿ ನಡೆದಿದೆ. ವಿದ್ಯುತ್ ಕಂಬ ಬಿದ್ದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದ ರಿಂದ ಅದೃಷ್ಟವಶಾತ್ ಭಾರೀ ಅನಾಹುತ ವೊಂದು ತಪ್ಪಿದಂತಾಗಿದೆ.
ಬೆಂಗಳೂರಿನಿಂದ ಹೊಸನಗರ - ನಗರ ಮಾರ್ಗವಾಗಿ ಕೊಲ್ಲೂರು ಕಡೆ ಚಲಿಸುತ್ತಿದ್ದ ಬಸ್. ಈ ವೇಳೆ ಹಠಾತ್ತನೇ ಉರುಳಿಬಿದ್ದ ವಿದ್ಯುತ್ ಕಂಬ. ಬಸ್ನ ಹಿಂಬದಿಯ ಒಂದು ಬದಿಗೆ ವಿದ್ಯುತ್ ತಂತಿ ಸಮೇತ ಬಿದ್ದಿದೆ. ಕ್ಷಣಕಾಲ ಆತಂಕಗೊಂಡ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರು.
ಬಳಿಕ ಬಸ್ ಚಾಲಕ, ನಿರ್ವಾಹಕ ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿದ ಸ್ಥಳಕ್ಕೆ ಆಗಮಿಸಿ ಸಿಬ್ಬಂದಿ ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ತಾಲೂಕಿನಾದ್ಯಂತ ಕಳೆದೆರಡು ದಿನ ಗಳಿಂದ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದ ನೂರಾರು ಮರಗಳು ಧರೆಗುರುಳಿವೆ. ಮನೆಗಳು ಕುಸಿದು ಬಿದ್ದು ಜನಜೀವನ ಅಸ್ತವ್ಯವಸ್ತ ವಾಗಿದೆ.
Tags:
ಹೊಸನಗರ ಸುದ್ದಿ