ವಿಜಯ ಸಂಘರ್ಷ
ಶಿವಮೊಗ್ಗ: ಆರೋಗ್ಯ ಸದೃಢವಾಗಿ ರುವಂತೆ ಮಾರ್ಗದರ್ಶನ ನೀಡುವ ಜತೆಯಲ್ಲಿ ಜೀವ ಉಳಿಸುವ ಶ್ರೇಷ್ಠ ಕಾರ್ಯ ನಡೆಸುವ ವೃತ್ತಿ ವೈದ್ಯರದ್ದಾ ಗಿದೆ ಎಂದು ರೋಟರಿ ಕ್ಲಬ್ ಉತ್ತರ ಅಧ್ಯಕ್ಷ ಕೆ.ಸುಂದರ್ ರಾಮ್ ಹೇಳಿದರು.
ರೋಟರಿ ಕ್ಲಬ್ ಉತ್ತರ ಸಂಸ್ಥೆಯಿಂದ ಗುಡಲಕ್ ಆರೈಕೆ ಕೇಂದ್ರದಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದಾ ಆರೋಗ್ಯ ಸೇವೆ ನೀಡುವ ವೈದ್ಯರನ್ನು ಸನ್ಮಾನಿಸುವುದು ರೋಟರಿ ಸಂಕಲ್ಪ ದಿನದ ಉದ್ದೇಶವಾಗಿದ್ದು, ಸಂಸ್ಥೆ ವತಿಯಿಂದ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
2024-25ರಲ್ಲಿ ಹೆಚ್ಚಿನ ಸೇವಾ ಕಾರ್ಯ ನಡೆಸುವ ಉದ್ದೇಶವಿದೆ. ಪ್ರಪಂಚಾದ್ಯoತ ರೋಟರಿ ಸೇವೆ ನಡೆಸುತ್ತಿದೆ. ಜನೋಪಯೋಗಿ ಕಾರ್ಯಗಳನ್ನು ನಡೆಸಲಾಗುವುದು ಎಂದರು.
ಸಹಾಯಕ ಗವರ್ನರ್ ಎಸ್.ಆರ್. ನಾಗರಾಜ ಮಾತನಾಡಿ, ರೋಟರಿಯ ಆಶಯದಂತೆ ಸರ್ವರಿಗೂ ಪ್ರಾಮಾಣಿಕ ಸೇವೆಯ ಪ್ರಯತ್ನವನ್ನು ಮಾಡುವ ಉದ್ದೇಶದಿಂದ ಪ್ರಾರಂಭಿಸಿ ಈವರೆಗೂ ನಡೆಸಿರುವ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಸಂಸ್ಥೆಯ ಎಲ್ಲ ಸದಸ್ಯರು ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ ನಗರದ ಡಾ.ಚಂದುಶ್ರೀ ಅವರನ್ನು ಎ.ಎಸ್. ಚಂದ್ರಶೇಖರ ಸನ್ಮಾನಿಸಿದರು.
ಗೈನಾಕಾಲಜಿಸ್ಟ್ ಚಂದ್ರುಶ್ರೀ ಉಚಿತ ವೈದ್ಯಕೀಯ ತಪಾಸಣೆ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಆರೈಕೆ ಕೇಂದ್ರದ ಅಧ್ಯಕ್ಷ ರವೀಂದ್ರ ನಾಥ ಐತಾಳ ಅವರು ಆರೈಕೆ ಕೇಂದ್ರ ನಡೆದುಬಂದ ದಾರಿ ವಿವರಿಸಿ, ಪ್ರಪಂಚಾದ್ಯಂತ ರೋಟರಿಯ ಸಮಾಜಮುಖಿ ಕೊಡುಗೆ, ಅಸಹಾಯಕರಿಗೆ ಸಾಂತ್ವಾನ ಮತ್ತು ವೈದ್ಯಕೀಯ ನೆರವು, ಶಿಕ್ಷಣಕ್ಕೆ ಸಂಬಂಧಿಸಿದ ಸಹಾಯ ಉತ್ತಮ ಕಾರ್ಯದ ದಿಕ್ಸೂಚಿ ಎಂದರು.
ಕಾರ್ಯದರ್ಶಿ ರಮೇಶ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಬಸವರಾಜಪ್ಪ, ಸರ್ಜಾ ಜಗದೀಶ್, ಎ.ಎಸ್. ಚಂದ್ರಶೇಖರ, ಶಿವಪ್ಪ, ಅನಿಲ್ ಕುಮಾರ್ ಮತ್ತು ಎನ್.ಶ್ರೀಧರ ಉಪಸ್ಥಿತರಿದ್ದರು.
Tags:
ಶಿವಮೊಗ್ಗ ರೋಟರಿ ಸುದ್ದಿ