ವಿದ್ಯಾರ್ಥಿಗಳು ಸಾಧಕ ರಾಗಲು ಶ್ರಮ ಮುಖ್ಯ: ಪ್ರವೀಣ್‌

ವಿಜಯ ಸಂಘರ್ಷ 
ಭದ್ರಾವತಿ: ವಿದ್ಯಾರ್ಥಿಗಳು ಸಾಧಕರಾಗಲು ಶ್ರಮ ಪಡಬೇಕು. ಸಾಧನೆಗೆ ಶ್ರಮ ಮುಖ್ಯ. ಹಿರಿಯ ವಿದ್ಯಾರ್ಥಿಗಳ ಸಾಧನೆಗೆ ಸಿಗುವ ಗೌರವಗಳು ಕಿರಿಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ ಎಂದು ಈಸೂರು ಸರಕಾರಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರವೀಣ್‌ ಮಹಿಷಿ ಹೇಳಿದರು.
ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್‌ನ ಸೇಂಟ್ ಜೋಸೆಫ್ ಪಿಯು ಕಾಲೇಜ್ ಆಫ್ ಎಕ್ಸಲೆನ್ಸ್ ವಿದ್ಯಾ ಸಂಸ್ಥೆಯು ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತಿಸಿ ಕಳೆದ ದ್ವಿತೀಯ ಪಿಯು ಪರೀಕ್ಷೆ ಯಲ್ಲಿ ರ್ಯಾoಕ್ ಮತ್ತು ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹಾಗೂ ಶಿಕ್ಷಕರಿಗೆ ಗೌರವಿಸುವ ಸಮಾರಂಭದಲ್ಲಿ ಮಾತನಾಡಿದರು.

ಪೋಷಕರು ಮತ್ತು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಈ ವಿದ್ಯಾಸಂಸ್ಥೆಯು ಶಿಕ್ಷಣ ಕ್ಷೇತ್ರಕ್ಕೆ ಮಾದರಿ ಯಾಗಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಎಲ್ಲರನ್ನೂ ಒಂದು ಕುಟುಂಬದವರಂತೆ ಕಾಣುತ್ತಾ ಮಕ್ಕಳಿಗೆ ನೀಡುವ ಉತ್ತೇಜನ ಮತ್ತು ಸಂಸ್ಕೃತಿ ಬೆಳಗುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಗೌರವಗಳು ಸುಮ್ಮನೆ ಸಿಗಲ್ಲ. ಕಷ್ಟಪಟ್ಟಾಗ ಮಾತ್ರ ಆದರೆ ಲಾಭ ಲಭಿಸುತ್ತದೆ. ನೂರಾರು ಟನ್ ಮಣ್ಣು ಸೋಸಿದಾಗ ದೊರೆಯುವ ಬಂಗಾರದಂತೆ ನೀವೆಲ್ಲಾ ಹೊಳೆಯಬೇಕು. ನಿಮ್ಮೊಳಗಿನ ಚೈತನ್ಯ ಆಸಕ್ತಿ ಮತ್ತು ಗುರಿ ಹೊಂದಿ ಭವಿಷ್ಯ ರೂಪಿಸಿಕೊಳ್ಳಲು ನಿಮ್ಮ ಸುತ್ತಮುತ್ತಲಿ ನಲ್ಲಿಯೇ ಬೇಕಾದಷ್ಟು ವಿಫುಲ ಅವಕಾಶ ಗಳಿರುವುದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹಲವು ನೀತಿ ಕಥೆಗಳನ್ನು ಉಣಬಡಿಸಿದರು.

ಪ್ರಾಂಶುಪಾಲರಾದ ಲತಾ ರಾಬರ್ಟ್ ಅವರು ಮಾತನಾಡಿ ವಿದ್ಯಾಸಂಸ್ಥೆಯು ಕೇವಲ ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ ವಿದ್ಯಾರ್ಥಿಗಳು ಸಮಾಜ ಮತ್ತು ಪೋಷಕರಿಗೆ ಪೂರಕ ರಾಗುವ ಹಾದಿಯನ್ನು ತೋರಿಸುವ ಸಂಸ್ಥೆಯಾಗಿದೆ. ಭವಿಷ್ಯದಲ್ಲಿ ಸಂಸ್ಕಾರ ಸಂಸ್ಕೃತಿ ಶಿಸ್ತು ಉತ್ತಮ ನಡತೆಗೆ ಹೆಚ್ಚು ಆದ್ಯತೆ ನೀಡುವ ಕಲಿಸುವ ಹೆಗ್ಗಳಿಕೆಯ ಶಿಕ್ಷಣ ನಮ್ಮದಾಗಿದೆ ಎಂದು ಹೇಳಿ ಶಾಲೆಯಲ್ಲಿರುವ ನುರಿತ ತಜ್ಞ ಶಿಕ್ಷಕರನ್ನು ಪರಿಚಯಿಸಿದರು

2023-24 ನೇ ಸಾಲಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಫಲಿತಾಂಶದಲ್ಲಿ ರಾಜ್ಯಕ್ಕೆ 8 ನೇ ರ್ಯಾoಕ್ ಪಡೆದ ನಿಮ್ರಾನ್ ಮತ್ತು 10 ನೇ ರ್ಯಾoಕ್ ಪಡೆದು ಕೀರ್ತಿ ಗಳಿಸಿದ ಎಂ.ತ್ರಿಷಾ ಇಬ್ಬರು ವಿದ್ಯಾರ್ಥಿನಿಯರಿಗೆ ಮತ್ತು ಅವರ ಪೋಷಕರಿಗೆ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ರವರು ತಲಾ ಒಂದು ಲಕ್ಷ ರೂ ನಗದು ಪ್ರೋತ್ಸಾಹ ಧನ ನೀಡಿ ಗೌರವಿಸಿದರು.

ವಾಣಿಜ್ಯ ವಿಭಾಗದಲ್ಲಿ ತಾಲೂಕಿನ ಟಾಪರ್‌ ಗಳಾದ ಸಿಂಚನ ಮತ್ತು ಮೋನಿಕಾ ಚೋಪ್ರಾ ಮತ್ತು ಹೆಚ್ಚು ಅಂಕಗಳಿಸಿದ 44 ವಿದ್ಯಾರ್ಥಿ ಗಳಿಗೆ ಮತ್ತು ಪೋಷಕರಿಗೆ ಬೆಳ್ಳಿ ನಾಣ್ಯ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು. ಕೀರ್ತಿ ತರಲು ಶ್ರಮಿಸಿದ ಉಪನ್ಯಾಸಕರಿಗೆ ನಗದು ಪುರಸ್ಕಾರ ನೀಡಲಾಯಿತು. ನಿಧಿಕೇಶವ್ ಪ್ರಾರ್ಥಿಸಿದರೆ, ಆಶ್ರಿತ ಸ್ವಾಗತಿಸಿ ಅಪೇಕ್ಷಾ ಮತ್ತು ಪುಷ್ಪಾವತಿ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು