ವಿಜಯ ಸಂಘರ್ಷ
ತೀರ್ಥಹಳ್ಳಿ: ಸಮೀಪದ ತಾವರೇಹಳ್ಳಿ ಗ್ರಾಮದ ರವಿ ಎಂಬವರ ಗದ್ದೆಯಲ್ಲಿ ಮೇಯಲು ಹೋದ ಎಮ್ಮೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ ಘಟನೆ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿ ಎಮ್ಮೆ ಇದಾಗಿದ್ದು ರವಿಯವರು ಆರು ತಿಂಗಳ ಹಿಂದೆ ರೂ.45 ಸಾವಿರ ಹಣ ಕೊಟ್ಟು ಖರೀದಿಸಿ ತಂದಿದ್ದರು.
ಬುಧವಾರ ಮಧ್ಯಾಹ್ನದವರೆಗೂ ವಿದ್ಯುತ್ ತಂತಿ ತೆರವುಗೊಳಿದರ ಕಾರಣ ನೀರು ತುಂಬಿದ್ದ ಗದ್ದೆಯಲ್ಲಿ ಸಾವನ್ನಪ್ಪಿದ್ದ ಈ ಎಮ್ಮೆ ಕೊಳೆಯುವ ಹಂತ ತಲುಪಿತ್ತು. ರವಿಯವರಿಗೆ ಉಂಟಾದ ನಷ್ಟದ ಪರಿಹಾರ ನೀಡುವಂತೆ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿ ಗಳಿಗೆ ಆಗ್ರಹ ಮಾಡಿದ್ದಾರೆ.
Tags:
ತೀರ್ಥಹಳ್ಳಿ ಸುದ್ದಿ