ವಿಜಯ ಸಂಘರ್ಷ
ಕೆ ಆರ್ ಪೇಟೆ: ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿ ಗಳಿಗೆ ಹಳೇ ವಿದ್ಯಾರ್ಥಿ ದೊಡ್ಡಗಾಡಿಗನಹಳ್ಳಿ ಗ್ರಾಮದ ರಾಜು ಎಸ್ ಎಂಬುವವರು ಲ್ಯಾಪ್ ಟಾಪ್, ಸ್ಕ್ರೀನ್ ಪ್ರೊಜೆಕ್ಟ್ರರ್, ವಾಟರ್ ಬಾಟಲ್, ನೋಟ್ ಪುಸ್ತಕ ಗಳು ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಐದಾರು ವರ್ಷಗಳಿಂದ ಇದೇ ಶಾಲೆಯು ಮುಚ್ಚಲ್ಪಟ್ಟಿತ್ತು. ಗ್ರಾಮಸ್ಥರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರದಿಂದ ಮುಚ್ಚಿದ್ದ ಶಾಲೆಯನ್ನು ಪುನಃ ಆರಂಭಿಸಿ ಶಾಲೆಯ ಕ್ರಿಯಾಶೀಲ ಶಿಕ್ಷಕ ಭಗವಾನ್ ಹೆಚ್ಚಿನ ಶ್ರಮ ವಹಿಸಿ ಕಳೆದ ವರ್ಷ 22 ಮಕ್ಕಳು,ಈ ವರ್ಷ ಪ್ರಸ್ತುತ 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಗ್ರಾಮದ ಹಳೆಯ ವಿದ್ಯಾರ್ಥಿ ಸ್ಯಾಮ್ ಸಂಗ್ ಕಂಪನಿಯ ಉದ್ಯೋಗಿ ರಾಜು ಎಸ್,ರಮ್ಯವೇಣುಗೋಪಾಲ್,ದಿವ್ಯ ಅವರು ಶಾಲೆಗೆ ಕಲಿಕಾ ಸಾಮಗ್ರಿ ಗಳನ್ನು ಉಡುಗೊರೆಯಾಗಿ ನೀಡಿದರು.
ಬಳಿಕ ಮಾತನಾಡಿದ ರಾಜು ಎಸ್ ಪೋಷಕರು ಹಾಗೂ ಗ್ರಾಮಸ್ಥರು ಸರ್ಕಾರಿ ಶಾಲೆಗಳನ್ನು ಉಳಿಸಲು ಪಣ ತೊಡಬೇಕು. ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತಿವೆ.ಕಾರಣ ಪೋಷಕರು ಖಾಸಗೀ ಶಾಲೆಗಳಲ್ಲಿ ನಮ್ಮ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಅಂದರೆ ಅವರಿಗೆ ಹೆಚ್ಚಿನ ಗೌರವ ಸಿಗುತ್ತದೆ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡಿ ರುತ್ತಾರೆ. ಆದರೆ ಅದು ಸುಳ್ಳು ಇದನ್ನು ಬದಿಗೊತ್ತಿ ನಮ್ಮ ನಮ್ಮ ಗ್ರಾಮಗಳ ಶಾಲೆಗಳನ್ನು ಉಳಿಸುವ ಕೆಲಸವನ್ನು ಮಾಡಲು ಎಲ್ಲರ ಸಹಕಾರ ಅತ್ಯಗತ್ಯ ವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗಗಳ ಸರ್ಕಾರಿ ಶಾಲೆಗಳಲ್ಲಿ ರೈತರು,ಬಡವರು,ಹಿಂದುಳಿದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಾರೆ.ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಇಂದು ದೊಡ್ಡ ದೊಡ್ಡ ವ್ಯಕ್ತಿಗಳಾಗಿ ಹಾಗೂ ಉನ್ನತ ಮಟ್ಟದ ಅಧಿಕಾರ ಹಾಗೂ ಹುದ್ದೆಗಳಲ್ಲಿ ಕೆಲಸವನ್ನು ಮಾಡುತ್ತಿರು ವುದನ್ನು ಕಾಣಬಹುದು. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಲು ನಮ್ಮ ನಿಮ್ಮಲ್ಲರ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಭಗವಾನ್ ಮಾತನಾಡಿ ಇವತ್ತಿನ ಸ್ಪರ್ದಾ ಪ್ರಪಂಚದಲ್ಲಿ ಮಕ್ಕಳ ಆಧುನಿಕ ಕಲಿಕೆಗೆ ಅನುಕೂಲ ವಾಗುವಂತೆ ಶಾಲೆಗೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ರಾಜು ಎಸ್,ರಮ್ಯವೇಣು ಗೋಪಾಲ್, ದಿವ್ಯ ಅವರಿಗೆ ಧನ್ಯವಾದಗಳು. ಇವರಷ್ಟೆ ಅಲ್ಲ ಯಾರೇ ಆಗಲಿ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸಲು ಸರ್ಕಾರದ ಜೊತೆಗೆ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಹ ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರ ನೀಡಿದಾಗ ಮಾತ್ರ ಸರ್ಕಾರಿ ಶಾಲೆಗಳ ಉಳಿಗಾಲ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್,ಅಭಿಲಾಷ್, ಸುನಿಲ್ ಕುಮಾರ್,ಶಿಕ್ಷಕಿಯರಾದ ರಮ್ಯ,ಶೃತಿ, ಪ್ರಕಾಶ್,ಶಾಲಾ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಅಡುಗೆ ಸಿಬ್ಬಂದಿ ಇದ್ದರು.
ವರದಿ *ಕಾಮನಹಳ್ಳಿ ಮಂಜುನಾಥ್*
Tags:
ಕೆ ಆರ್ ಪೇಟೆ ವರದಿ