ವಿಜಯ ಸಂಘರ್ಷ
ಭದ್ರಾವತಿ: ಡೆಂಗ್ಯೂ ನಿಯಂತ್ರಣಕ್ಕಾಗಿ ಈಡೀಸ್ ಸೊಳ್ಳೆ ನಿರ್ಮೂಲನಾ ದಿನದ ಅಂಗವಾಗಿ ಸಾರ್ವಜನಿಕರಿಗೆ ಡೆಂಗ್ಯೂ ಮುಂಜಾಗ್ರತೆಯ ಕುರಿತು ತಿಳಿಸಲಾಯಿತು.
ಶಾಸಕ ಬಿ.ಕೆ. ಸಂಗಮೇಶ್ವರ್‌ರವರು ಡೆಂಗ್ಯೂ ನಿಯಂತ್ರಣದ ಪೋಸ್ಟರ್ ಗಳನ್ನು ಸಾರ್ವಜನಿಕರಿಗೆ ನೀಡುವುದರ ಮೂಲಕ ಅರಿವು ಮೂಡಿಸಲಾಯಿತು.
ನಂತರ ನಗರದ ಉಜ್ಜನೀಪುರದಲ್ಲಿ ಎಲ್.ಇ.ಡಿ ಪರದೆಯ ಮೂಲಕ ಡೆಂಗ್ಯೂ ಜ್ವರ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಶಾಲಾ ಮಕ್ಕಳಿಂದ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಭರತ್‌ರಾಜ್, ತಾಲ್ಲೂಕು ಅರೋಗ್ಯಾಧಿಕಾರಿ ಡಾ:ಅಶೋಕ. ನಗರಸಭಾ ಪರಿಸರ ಇಂಜಿನೀಯರ್ ಎಂ.ವಿ, ಪ್ರಭಾಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದ ಮೂರ್ತಿ, ಉಜ್ಜನೀಪುರ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ: ಪ್ರವೀಣ್ ಆಸ್ಪತ್ರೆ ಸಿಬ್ಬಂದಿಗಳು, ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Tags:
ಭದ್ರಾವತಿ