ವಿಜಯ ಸಂಘರ್ಷ
ಕೆ.ಆರ್.ಪೇಟೆ: ತಾಲೂಕಿನ ಬೂಕನ ಕೆರೆ ಹೋಬಳಿಯ ಕಾಶಿಮುರಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರೀತಮ್, ಉಪಾಧ್ಯಕ್ಷ ರಾಗಿ ಭೈರವಿ ಆಯ್ಕೆಯಾಗಿದ್ದಾರೆ.
ಹೇಮಾವತಿ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ ಕಾಶಿ ಮುರುಕ ನಹಳ್ಳಿ ಬಸವೇಗೌಡ, ಶಾಲಾ ಆವರಣ ದಲ್ಲಿ ಆಯೋಜಿಸಿದ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ, ನೂತನ ಎಸ್ ಡಿಎಂಸಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳ ಪೋಷಕರು ಖಾಸಗಿ ಶಾಲೆಗಳ ಮೇಲಿರುವ ವ್ಯಾಮೋಹದಿಂದ ಬಹುತೇಕ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ ಆದರೆ ನನ್ನ ಹುಟ್ಟೂರಾದ ಕಾಶಿಮುರುಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯ ಕ್ರಿಯಾಶೀಲ ಆಡಳಿತ ಮಂಡಳಿ ಪರಿಶ್ರಮ ಹಾಗೂ ಹಳೇ ವಿದ್ಯಾರ್ಥಿ ಗಳ ಸಹಕಾರದಿಂದ ಖಾಸಗಿ ಶಾಲೆಯು ನಾಚುವಂತೆ ನಮ್ಮೂರಿನ ಗ್ರಾಮದ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.
ಹಿಂದಿನಿಂದಲೂ ನಮ್ಮೂರಿನ ಗ್ರಾಮಕ್ಕೆ ವಿಶೇಷದ ಗೌರವವಿದೆ. ನಮ್ಮ ಸರ್ಕಾರಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿ ಗಳು ವಿವಿಧ ಕ್ಷೇತ್ರದಲ್ಲಿ ಸಾಧಕರಾಗಿ ರೂಪಿಸಿರುವ ಶಾಲೆಯ ಅಭಿವೃದ್ಧಿ ಸಮಿತಿ ನೂತನ ಅಧ್ಯಕ್ಷ ರಾಗಿ ಕ್ರಿಯಾಶೀಲವುಳ್ಳ ಸಮಾಜ ಚಿಂತಕ ಪ್ರೀತಮ್ ಆಯ್ಕೆಯಾಗಿ ರುವುದು ಮಕ್ಕಳ ಭವಿಷ್ಯಕ್ಕೆ ಸಹಕಾರಿ ಯಾಗಲಿದೆ. ಅವರು ಕಳೆದ ಅವಧಿ ಯಲ್ಲೂ ಸಮಾಜಮುಖಿ ಕಾರ್ಯಕ್ರಮ ದೊಂದಿಗೆ ನಮ್ಮ ಶಾಲೆಯನ್ನು ಮುಖ್ಯ ವಾಹಿನಿಗೆ ತರಲು ಶ್ರಮವಹಿಸಿದನ್ನು ಪರಿಗಣಿಸಿ ಮತ್ತೊಮ್ಮೆ ಅವರಿಗೆ ಅವಕಾಶ ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ನೂತನ ಅಧ್ಯಕ್ಷ ಪ್ರೀತಮ್ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸುವ ಮೂಲಕ ಅಧಿಕಾರ ಸ್ವೀಕರಿಸಿ ಮಾತನಾಡಿ, ಮಕ್ಕಳ ಪೋಷಕರು ಸರ್ಕಾರಿ ಶಾಲೆಗಳ ಮೇಲಿರುವ ಕೀಳರಿಮೆಯನ್ನು ಮೊದಲು ದೂರ ಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿದೆ ಅದನ್ನು ಗುರುತಿ ಸುವ ಕೆಲಸ ನಮ್ಮದಾಗಬೇಕು .ಕೆಲ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ಹೆಸರಿನಲ್ಲಿ ಮಕ್ಕಳಿಗೆ ಹಾಗೂ ಪೋಷಕರಿಗೂ ತೀವ್ರ ಒತ್ತಡ ಹಾಕುತ್ತಾರೆ ಹೊರತು ಮಕ್ಕಳ ಭವಿಷ್ಯ ರೂಪಿಸುವುದಿಲ್ಲ.ಉತ್ತಮವಾಗಿ ವಿದ್ಯಾಭ್ಯಾಸ ಮಾಡಲು ಶಾಲಾ ಶಿಕ್ಷಕ ವೃಂದದವರು ಅಷ್ಟೇ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಶ್ರಮವಹಿಸ ಬೇಕು ಅದು ನಮ್ಮೂರಿನ ಸರ್ಕಾರಿ ಶಾಲಾ ಶಿಕ್ಷಕರು ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ನಮ್ಮ ಸಹಕಾರ ಪರಿ ಶ್ರಮವನ್ನು ನನ್ನ ಆಡಳಿತ ಅವಧಿಯಲ್ಲಿ ಉಳಿದ ಶಾಲಾ ಭೌತಿಕ ಸೌಲಭ್ಯ ಬಾಕಿ ಇರುವುದನ್ನು ಸಂಬಂಧಪಟ್ಟ ಅಧಿಕಾರಿ ಗಳಿಗೆ ಮನವರಿಕೆ ಮಾಡಿ ನನ್ನ ಸಹ ಕಾರದಿಂದಲ್ಲೂ ಶಾಲಾ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ ಪಂ ಸದ್ಯಸ್ಯ ಚಂದಶೇಖರ್, ಮಾಜಿ ಸದಸ್ಯ ನಿಂಗೇಗೌಡ, ಎಸ್.ಡಿ.ಎಂ.ಸಿ ನೂತನ ಉಪಾಧ್ಯಕ್ಷೆ ಭೈರವಿ, ಸದ್ಯಸರಾದ ಪ್ರಶಾಂತ್ ಕುಮಾರ್, ಅಶ್ವಿನಿ, ಹೇಮಂತ್ ಕುಮಾರ್, ಗೋಪಾಲ, ಪಾವನ, ಮಲ್ಲೇಶ ಚಾರಿ, ಮಂಜಚಾರಿ, ಲಲಿತಾ, ಮುರಳೀಧರ, ಯಶೋಧ, ಗ್ರಾಮದ ಮುಖಂಡರಾದ ಪುಟ್ಟರಾಜ ಗೌಡ, ರಾಮೇಗೌಡ, ರಾಮಣ್ಣ, ಅಂಗಡಿ ಗೋವಿಂದ್ದೇಗೌಡ, ರಜೇನ ಹಳ್ಳಿ ರತನ್, ಅಂಗನವಾಡಿ ಶಿಕ್ಷಕಿ ರೇಣುಕಾ, ಶಾಲಾ ಮುಖ್ಯ ಶಿಕ್ಷಕ ಗಜೇಂದ್ರ, ಅಶ್ವಿನಿ, ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಭಾಗವಹಿಸಿದರು.
*✍️ಸುದ್ದಿಯೊಂದಿಗೆ ಮನು ಮಾಕವಳ್ಳಿ
ಕೆ ಆರ್ ಪೇಟೆ*
Tags:
ಕೆ.ಆರ್. ಪೇಟೆ ವರದಿ