ವಯನಾಡು ಭೀಕರ ದುರಂತ: ಮೃತ ಕುಟುಂಬಸ್ಥರಿಗೆ ನಿಖಿಲ್ ಕುಮಾರ ಸ್ವಾಮಿ ಸಾಂತ್ವನ

ವಿಜಯ ಸಂಘರ್ಷ 

ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮಕ್ಕೆ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಭೇಟಿ ನೀಡಿ, ಕೇರಳದ ವಯನಾಡು ಭೀಕರ ದುರಂತದಲ್ಲಿ ಮೃತರಾದ ಲೀಲಾವತಿ ಹಾಗೂ ನಿಹಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕುಟುಂಬದೊಂದಿಗೆ ಮಾತನಾಡಿದ ಅವರು, ದುರಂತ ಈಗಾಗಲೇ ನಡೆದು ಹೋಗಿದೆ, ಧೈರ್ಯವಾಗಿರಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಮೃತ ಕುಟುಂಬಸ್ಥರನ್ನು ಸಮಾಧಾನ ಪಡಿಸಿದರು.

ನಮ್ಮವರ ಮೃತ ದೇಹವನ್ನಾದರು ಕೊಡಸಿ, ಅವರ ಮುಖವನ್ನಾದರು ನಾವು ನೋಡುತ್ತೇವೆ. ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ನಿಖಿಲ್ ಮುಂದೆ ಕುಟುಂಬಸ್ಥರ ಕಣ್ಣೀರಿಟ್ಟಿದ್ದು, ಮೃತರ ದೇಹವನ್ನು ಹುಡುಕಾಟ ನಡೆಯುತ್ತಿದೆ. ನಾವು ಸಹ ಈ ಬಗ್ಗೆ ಮುತುವರ್ಜಿವಹಿಸುತ್ತೇವೆ ಎಂದು ನಿಖಿಲ್ ಭರವಸೆಯ ನುಡಿದರು. 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ವಯನಾಡಿನಲ್ಲಿ ಪ್ರಕೃತಿ ವಿಕೋಪ ದಿಂದ ಭೂಕುಸಿತವಾಗಿದೆ. 2 ದಿನ ದಿಂದ ಕಾರ್ಯಾಚರಣೆ ನಡೆಯುತ್ತ ಲಿದ್ದು, 221 ಮಂದಿಗೂ ಹೆಚ್ಚು ಜನರು ಮೃತಪಟ್ಟಿ ರುವ ಮಾಹಿತಿ ಇದೆ. ದುರಂತದಲ್ಲಿ ಕೆ.ಆರ್.ಪೇಟೆ ಕತ್ತರ ಘಟ್ಟದ ಲೀಲಾವತಿ ಹಾಗೂ ನಿಹಾಲ್ ಮೃತಪಟ್ಟಿದ್ದಾರೆ. ಇವರನ್ನು ಕಳೆದು ಕೊಂಡು ಲೀಲಾವತಿ ಕುಟುಂಬಸ್ಥರು ನೋವಿನಲ್ಲಿದ್ದಾರೆ ಅವರಿಗೆ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದರು.

ಇದೇ ಕುಟುಂಬದ ಇನ್ನೂ ಮೂವರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ವರ್ಷದಿಂದ ಕೇರಳದಲ್ಲಿ ಈ ಕುಟುಂಬ ನೆಲೆಸಿತ್ತು. ಅವರ ಹೊಸಮನೆಯ ಗೃಹಪ್ರವೇಶ ಇದೇ ತಿಂಗಳ 6 ನೇ ತಾರೀಖು ಆಗಬೇಕಿತ್ತೆಂದು ತಿಳಿದು ಬಂದಿದೆ.

 ವಯನಾಡು ದುರಂತದಲ್ಲಿನ ಭಗವಂತನ ಆಟಕ್ಕೆ ಇಂದು ಬಹಳಷ್ಟು ಜನ ಸಾವನಪ್ಪಿ ದ್ದಾರೆ. ಬಹಳಷ್ಟು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರಂತದ ಬಗ್ಗೆ ಕೇಂದ್ರ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ರವರು ನಿರಂತರ ಮಾಹಿತಿ ಪಡೆದುಕೊಂಡು ಗಾಯಾಳುಗಳ ಯೋಗಕ್ಷೇಮ ವಿಚಾರಿಸುತ್ತಿ ದ್ದಾರೆ ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು