ಸರ್ಕಾರದ ಆರೋಗ್ಯ ಭಾಗ್ಯ ಯೋಜನೆ ಸದ್ಬಳಕೆ ಮಾಡಿಕೊಳ್ಳಿ : ಜಿ.ಕೆ.ಮಿಥುನ್ ಕುಮಾರ್

ವಿಜಯ ಸಂಘರ್ಷ 

ಶಿವಮೊಗ್ಗ : ಸರ್ಕಾರದ ಆರೋಗ್ಯ ಭಾಗ್ಯ ಯೋಜನೆ ಬಳಸಿಕೊಂಡು ಸಕಾಲದಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್.ಜಿ.ಕೆ ಅಭಿಮತ ವ್ಯಕ್ತಪಡಿಸಿದರು.

ಅವರು ಇಂದು ತಮ್ಮ ಕಚೇರಿಯಲ್ಲಿ ಇಲಾಖೆಯಲ್ಲಿ 32 ವರ್ಷಗಳಿಂದ ಸತತ ಸೇವೆಗಳನ್ನು ಸಾಗರ, ಭದ್ರಾವತಿ, ದೊಡ್ಡಪೇಟೆ ಹಾಗೂ ಸಂಚಾರಿ ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಎ.ವಜೀರ್ ಅಹಮದ್ ಹಾಗೂ ಶಿವಮೊಗ್ಗ ಕುಂಸಿ ಸೇರಿದಂತೆ ಹಲವಾರು ಕಡೆ 32 ವರ್ಷಗಳಿಂದ ಸೇವೆಸಲ್ಲಿಸಿದ ರಮೇಶ್ ಇವರು ಎ.ಎಸ್.ಐ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಇವರನ್ನು ಸನ್ಮಾನಿಸಿ ಗೌರವಿಸಿದರು.

ನಿವೃತ್ತಿಯ ನಂತರ ತಮ್ಮ ಬದುಕನ್ನು ಸುಂದರವಾಗಿ ಹಾಗೂ ಆರೋಗ್ಯಕರವಾಗಿ ರೂಪಿಸಿಕೊಳ್ಳಬೇಕು. ಇಲಾಖೆಗೆ ಗೌರವ ತರಬೇಕು ಎಂದ ಅವರು, ನಿವೃತ್ತಿಯ ನಂತರ ಆರೋಗ್ಯ ಭಾಗ್ಯ ಯೋಜನೆ ಜಾರಿಯಲ್ಲಿದ್ದು, ಕುಟುಂಬದವರೆಲ್ಲ ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಎ.ಎಸ್.ಐ ಆಗಿ ನಿವೃತ್ತಿ ಹೊಂದಿದ ಎ. ವಜೀರ್ ಅಹಮ್ಮದ್ ಮಾತನಾಡಿ, ಸೇವೆ ತೃಪ್ತಿ ತಂದಿದೆ ಜೊತೆಗೆ ಸಾರ್ವಜನಿಕವಾಗಿ ಗೌರವ ತಂದಿದೆ. ಇಲಾಖೆಯಲ್ಲಿ 32 ವರ್ಷ ಯಾವುದೇ ಕಳಂಕ ಬಾರದ ರೀತಿ ಸೇವೆ ಸಲ್ಲಿಸಿದ ತೃಪ್ತಿ ಜೊತೆಗೆ ಅಪಾರ ಜನರ ಗೌರವ ಸಿಕ್ಕಿದೆ. ಅದನ್ನು ಉಳಿಸಿಕೊಂಡು ಹೋಗುತ್ತೇವೆ ಎಂದು ನುಡಿದರು.

ಸಮಾರಂಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್ ಕುಮಾರ್, ಡಾ.ಸುಹಾನ, ಸುನೈನಾ, ಶಾಹಾನಬೇಗಂ, ನಿವೃತ್ತಿ ಎ.ಎಸ್.ಐ ವೀರೇಶಪ್ಪ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು