ವಿಜಯ ಸಂಘರ್ಷ
ಶಿವಮೊಗ್ಗ : ಮಕ್ಕಳಲ್ಲಿ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪೋಷಕರ ಪ್ರಭಾವ ಮುಖ್ಯವಾಗಿರುತ್ತದೆ. ಹೆಚ್ಚು ತರಕಾರಿ ಸೇವಿಸುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗುತ್ತದೆ ಎಂದು ಯುನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ.ಅಜಯ್ ಬಡ್ಡಿ ಹೇಳಿದರು.
ನಗರದ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಸಂಸ್ಥೆಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಈಗಿನ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಅತಿ ಹೆಚ್ಚು ಕಾಡುತ್ತಿರುವ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ಮುಖ್ಯವಾಗಿ ಪೋಷಕರು ಬೇಕರಿ ತಿನಿಸು ಚಾಕಲೇಟ್ ಹಾಗೂ ಅತಿ ಹೆಚ್ಚು ಹೊರಗೆ ಸಿಗುವ ಆಹಾರಗಳನ್ನು ನೀಡುವುದು ಕಡ್ಡಾಯವಾಗಿ ತಡೆಯ ಬೇಕು. ಮನೆಯಲ್ಲಿ ತಯಾರಿಸಿದ ಆಹಾರಗಳು ಅತಿ ಹೆಚ್ಚು ತರಕಾರಿ ಗಳನ್ನು ನೀಡುವುದರಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನೀಗುವುದ ರಲ್ಲಿ ಸಹಾಯವಾಗುತ್ತದೆ. ಸಮಯಕ್ಕೆ ಸರಿಯಾಗಿ ವ್ಯಾಕ್ಸಿನೇಷನ್ ಹಾಕಿಸುವುದು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅತಿ ಹೆಚ್ಚು ಗಮನ ನೀಡುವುದು ಈಗಿನ ಪರಿಸ್ಥಿತಿಯಲ್ಲಿ ಮುಖ್ಯ ಎಂದರು.
ಯಾವಾಗಲೂ ಪೋಷಕರು ಮಕ್ಕಳ ಮುಂದೆ ತಂದೆ ತಾಯಿಯ ಸಂಬಂಧ ಒಳ್ಳೆಯ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳು ಪೋಷಕರನ್ನು ಅವಲಂಬಿಸಿ ಅನುಕರಣೆ ಮಾಡುವುದರಿಂದ ಪೋಷಕರು ಹೇಗೆ ನಯ ವಿನಯ ದಿಂದ ಮಕ್ಕಳ ಮುಂದೆ ವರ್ತಿಸು ತ್ತಾರೋ ಅದೇ ರೀತಿ ಮಕ್ಕಳು ಮುಂದಿನ ದಿನಗಳಲ್ಲಿ ಅನುಸರಿಸು ತ್ತಾರೆ. ಹಾಗೆಯೇ ಒಳ್ಳೆಯ ಆಹಾರ ತರಕಾರಿಗಳು ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್.ಜಿ ಮಾತನಾಡಿ, ಡಾ. ಅಜಯ್ ಬಡ್ಡಿಯವರು ಮಕ್ಕಳ ಬೆಳವಣಿಗೆಯ ಅಂಶಗಳು ಹಾಗೂ ಪೋಷಕರ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ ಅವರಿಗೆ ಧನ್ಯವಾದಗಳು ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಮತ್ತು ಆನ್ಸ್ ಕ್ಲಬ್ಬಿನ ಈಶ್ವರ್.ಬಿ.ವಿ, ಮಂಜುನಾಥ್ ಕದಂ, ಜಿ.ಎನ್. ಪ್ರಕಾಶ್, ರವಿ ಕೊಠೋಜಿ, ಜಗದೀಶ್, ಚಂದ್ರು, ಬಲರಾಮ್, ಬಸವ ರಾಜ್, ಗೀತಾ ಜಗದೀಶ್, ಶುಭ ಚಿದಾನಂದ ಮತ್ತಿತರಿದ್ದರು.
Tags:
ಶಿವಮೊಗ್ಗ