ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಜಿಲ್ಲಾಧಿಕಾರಿ ಗಳಿಗೆ ಮನವಿ

ವಿಜಯ ಸಂಘರ್ಷ 
ಭದ್ರಾವತಿ: ರಾಜ್ಯದ ಎಲ್ಲಾ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂಬ ಆದೇಶವಾಗಿದ್ದರೂ 
ವಿಐಎಸ್ಎಲ್ ಮತ್ತು ಎಂಪಿಎಂ ವ್ಯಾಪ್ತಿಗೆ ಸೇರಿದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರಗಳಿಲ್ಲದೆ ಬಡವರಿಗೆ ಅನ್ಯಾಯ ವಾಗಿದೆ ಎಂದು ದೇವರಾಜ ಅರಸು ಜನಸ್ಪಂಧನ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆ‌ರ್.ವೇಣುಗೋಪಾಲ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಕೊಳಚೆ ಪ್ರದೇಶಗಳ ಕ್ಷೇಮಾಭಿವೃದ್ಧಿಗೆ ಕಳೆದ 40 ವರ್ಷಗಳಿಂದ ಹೋರಾಟ ಮಾಡುತ್ತಾ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಆದರೆ ಸ್ಲಂ ವಾಸಿಗಳಿಗೆ ಯಾವುದೇ ದೋಷ ವಿಲ್ಲದ ಹಕ್ಕು ಪತ್ರ ಕೊಡಿಸಲು ಈವರೆವಿಗೂ ಆಗಿಲ್ಲ. ಇಲ್ಲಿನ ಸ್ಲಂಗಳು ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಮಾಲೀಕತ್ವ ದಲ್ಲಿಯೇ ಇವೆ. ಆದರೆ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯು ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಪರಿಚಯ ಪತ್ರ, ಹಕ್ಕು ಪತ್ರ ನೀಡಿದೆ. ಅದರ ಆಧಾರದಡಿ ನಗರಸಭೆಯು ಖಾತೆ ಸಹಾ ದಾಖಲಿಸಿದೆ.

ಬಹಳಷ್ಟು ಕೊಳಚೆ ಪ್ರದೇಶದ ನಿವಾಸಿಗಳಿಗೆ ನೀಡಿಲ್ಲ. ಮನೆಗಳ ಖಾತೆಯೂ ಇಲ್ಲದೆ ಪರದಾಟ ಹೆಚ್ಚಾಗಿದೆ. ಇವೆಲ್ಲವೂ ತಾಂತ್ರಿಕ ದೋಷದಿಂದ ಕೂಡಿದೆ. ಆದ್ದರಿಂದ ಜಿಲ್ಲಾಧಿಕಾರಿಗಳಾದ ತಾವು ಆದಷ್ಟು ಬೇಗ ಜನ ಪ್ರತಿನಿಧಿಗಳು. ಉಭಯ ಕಾರ್ಖಾನೆಗಳು ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸ್ಲಂ ನಿವಾಸಿಗಳಿಗೆ ಯಾವುದೇ ತಾಂತ್ರಿಕ ದೋಷಗಳಿಲ್ಲದ ಹಕ್ಕು ಪತ್ರ ಕೊಡಿಸಿ ಶಾಶ್ವತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗ್ಗಡೆ ಅವರಿಗೆ ಆರ್.ವೇಣುಗೋಪಾಲ್ ಮನವಿ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು