ಮನೆ-ಬೆಳೆ ನಷ್ಟಪೀಡಿತರಿಗೆ ರಾಜ್ಯ ಸರ್ಕಾರ ಸ್ಪಂದಿಸಲಿ: ಹೊನಗೋಡು ರತ್ನಾಕರ

ವಿಜಯ ಸಂಘರ್ಷ 
ಸಾಗರ (ಆನoದಪುರ): ರಾಜ್ಯ ಸರ್ಕಾರದ ಗ್ಯಾರಂಟಿ ಕೇವಲ ಲೋಕಸಭಾ ಚುನಾವಣೆವರೆಗೆ ಮಾತ್ರ ಸೀಮಿತ ಇದು ಕೇವಲ ಚುನಾವಣಾ ಗಿಮಿಕ್ ಅಷ್ಟೆ ಆಗಿದೆ ಎಂದು ಬಿ.ಜೆ.ಪಿ. ಮುಖಂಡ ಹಾಗೂ ಜಿ ಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ ಆಕ್ಷೇಪಿಸಿದರು. 

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಾಗರ ತಾಲ್ಲೂಕಿನಾ ದ್ಯಂತ ಅಪಾರ ಪ್ರಮಾಣದಲ್ಲಿ ಗಾಳಿ ಮಳೆಯ ಕಾರಣದಿಂದಾಗಿ ಅನೇಕರ ಮನೆ, ಜಮೀನಿನ ಬೆಳೆಗಳಿಗೆ ಹಾನಿ ಯುಂಟಾಗಿದೆ. ಸರ್ಕಾರ ದಾಖಲೆ ಇಲ್ಲದ ಮನೆಗಳಿಗೆ ಪರಿಹಾರವಿಲ್ಲ ಎಂದು ಹೇಳಿರುವುದು ಸರಿಯಲ್ಲ ಕಿಡಿ ಕಾರಿದರು. 

ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಲಪ್ಪ 400 ಕೋಟಿ ಪರಿಹಾರ ತಂದಿದ್ದರು. ಈಗಿರುವ ಸರ್ಕಾರ ಹಾಗೂ ಶಾಸಕರು ತಕ್ಷಣ ಪೀಡಿತರ ಬಗ್ಗೆ ಸರ್ವೆ ಮಾಡಿಸಿ ತ್ವರಿತವಾಗಿ ಸ್ಪಂದಿಸ ಬೇಕಿದೆ. ಹಿಂದೆ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡಲಾಗುತ್ತಿತ್ತು ಪ್ರಸ್ತುತ 8 ಲಕ್ಷ ನೀಡಬೇಕು ಆದರೆ ಈಗ ಸರ್ಕಾರ ದಿಂದ ಮಂಜೂರಾದ ಮನೆಯಲ್ಲಿಯೇ 30ರಿಂದ 50 ವರ್ಷಗಳ ಕಾಲದಿಂದ ಇದ್ದರೂ ಕಂದಾಯ ಇಲಾಖೆಯ ಕೈತಪ್ಪಿನಿಂದಾಗಿರುವ ಪ್ರಮಾದಕ್ಕೆ ಬಡಪಾಯಿಗಳಿಗೆ ಕೇವಲ 1 ಲಕ್ಷ ಪರಿಹಾರ ನೀಡಲು ಸರ್ಕಾರ ನಿರ್ಧರಿಸಿ ರುವುದು ತಪ್ಪು, ಇವರು ಗಳಿಗೂ 5 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮಪಂಚಾಯತಿಯಿoದ 10 ಸಾವಿರ ರೂ ಗಳ ಪರಿಹಾರ ಸಾಕಾಗುವುದಿಲ್ಲ ತಕ್ಷಣ ಸರ್ಕಾರ ಪೂರ್ಣ ಪ್ರಮಾಣದ ಪರಿಹಾರ ನೀಡಲು ಮುಂದಾಗಬೇಕು ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ಧಿಗೋಷ್ಠಿಯಲ್ಲಿ ಮುಖಂಡರು ಗಳಾದ ಆಚಾಪುರ ಶಾಂತಕುಮಾರ್, ಭರ್ಮಪ್ಪ, ರೇವಪ್ಪ ಹೊಸಕೊಪ್ಪ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು