ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ 183.2 : ಡ್ಯಾಂ ಗೇಟ್ ಓಪನ್

ವಿಜಯ ಸಂಘರ್ಷ 
ಭದ್ರಾವತಿ: ಭದ್ರಾ ಜಲಾನಯನ, ಹಿನ್ನೀರು ಪ್ರದೇಶದಲ್ಲಿ ಮಳೆ ಮತ್ತೆ ಆರ್ಭಟಿಸಿದ್ದು ಭದ್ರಾ ಡ್ಯಾಂ ನೀರಿನ ಮಟ್ಟ 183.2 ಅಡಿ ನೀರು ಸಂಗ್ರಹ ವಾಗಿದೆ. ಭರ್ತಿಗೆ ಇನ್ನು ಕೇವಲ 2.8 ನೀರು ಬೇಕು. ಡ್ಯಾಂಗೆ ಬರೋಬ್ಬರಿ 20,774 ಕ್ಯೂಸೆಕ್ ಒಳಹರಿವು ಇರುವ ಕಾರಣ ಡ್ಯಾಂ ಗೇಟ್ ತೆರೆಯ ಲಾಯಿತು.

ಹೆಚ್ಚು ಕಡಿಮೆ ಜಲಾಶಯ ಭರ್ತಿ ಯಾಗಿರುವ ಕಾರಣ ಹಾಗೂ ಒಳಹರಿವು 20 ಸಾವಿರಕ್ಕೂ ಹೆಚ್ಚಿರುವುದರಿಂದ ಈಗಾಗಲೇ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಇದು ರೈತರಲ್ಲಿ ಖುಷಿ ತಂದಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದ್ದು, ಭದ್ರಾ ಜಲಾಶಯಕ್ಕೆ 20,774 ಕ್ಯೂಸೆಕ್ ಹರಿದು ಬರುತ್ತಿತ್ತು. ಹೊರ ಹರಿವು ಜಾಸ್ತಿಯಾಗಿದೆ. 1954 ಕ್ಯೂಸೆಕ್ ಹೊರ ಹರಿವಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣ ದಲ್ಲಿ ಒಳಹರಿವು ಇರುವ ಕಾರಣ ಇದು ಹೆಚ್ಚಳವಾಗಲಿದೆ.

ಇನ್ನೂ 2.7 ಅಡಿ ನೀರು ಬರಬೇಕಿ ದ್ದರೂ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಇರುವ ಕಾರಣ ಭರ್ತಿಯಾಗುವ ಮುನ್ನವೇ ನೀರನ್ನು ಗೇಟ್ ತೆರೆದು ಹರಿಸಲಾಗುತ್ತದೆ. ಜುಲೈ ತಿಂಗಳ ಕೊನೆಯಲ್ಲಿಯೇ ಡ್ಯಾಂ ಭರ್ತಿ ಯಾಗುತ್ತಿರುವುದು ರೈತ ಸಮುದಾಯ ದಲ್ಲಿ ಸಂತಸಕ್ಕೆ ಕಾರಣವಾಗಿದೆ. ಭದ್ರಾ ಬಲಡಂದೆ ನಾಲೆಗೆ 458 ಕ್ಯೂಸೆಕ್ ಹಾಗೂ ಎಡದಂಡೆ ನಾಲೆಗೆ 83 ಕ್ಯೂಸೆಕ್ ಹರಿಸಲಾಗುತ್ತಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ.

ಕಳೆದ ವರ್ಷ ಜಲಾಶಯದ ನೀರಿನ ಮಟ್ಟ ಇದೇ ದಿನ 161.6 ಅಡಿ ನೀರು ಸಂಗ್ರಹವಿತ್ತು. ಒಳಹರಿವು 8324 ಕ್ಯೂಸೆಕ್ ಇತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು