ಭದ್ರಾ ಜಲಾಶಯದಿಂದ ಎರಡು ನಾಲೆಗಳಿಗೆ ಇಂದಿನಿಂದಲೇ ನೀರು ಬಿಡುಗಡೆಗೆ ನಿರ್ಧಾರ

ವಿಜಯ ಸಂಘರ್ಷ 
ಭದ್ರಾವತಿ: ಭದ್ರಾ ಜಲಾಶಯದಿಂದ ನಾಲೆಗಳಿಗೆ ಇಂದಿನಿಂದಲೇ ನೀರು ಬಿಡುಗಡೆ ಮಾಡಲು ಭದ್ರಾ ಕಾಡಾ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಮಲವಗೊಪ್ಪದ ಭದ್ರಾ ಕಾಡ ಕಚೇರಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರಾ ಡ್ಯಾಂ ನ ಬಲ‌ ಮತ್ತು ಎಡ ದಂಡೆಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಸೋಮವಾರ ರಾತ್ರಿಯಿಂದಲೇ ಡ್ಯಾಂ ಎರಡು ನಾಲೆಗಳಲ್ಲಿ ನೀರು ಹರಿಸಲು ನಿರ್ಧರಿಸ ಲಾಗಿದೆ. ನೀರಿನ ಲಭ್ಯತೆ ಮತ್ತು ಮಳೆಯ ಪ್ರಮಾಣ ಆಧರಿಸಿ ನೀರು ಬಿಡಲು ತೀರ್ಮಾನ ಮಾಡಲಾಗಿದೆ. ಎರಡು ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ. ನೀರು ಬಿಡುಗಡೆಯ ವೇಳಾಪಟ್ಟಿಯನ್ನು ಸಿದ್ಧಪಡಿಸುವಂತೆ ತಜ್ಞರಿಗೆ ಸೂಚನೆ ನೀಡಲಾಗಿದೆ.

ಈ ಬಾರಿ ಡ್ಯಾಂ ಭರ್ತಿಯಾಗುವ ಹಂತ ತಲುಪಿರುವ ಹಿನ್ನೆಲೆಯಲ್ಲಿ ನೀರು ಬಿಡುಗಡೆ ಮಾಡಲಾಗುತ್ತದೆ. ಬೇಸಿಗೆ ಯಲ್ಲಿ ಅಗತ್ಯ ಬೇಕಾಗುವ ನೀರಿನ ಪ್ರಮಾಣ ಗಮನ ದಲ್ಲಿಟ್ಟುಕೊಂಡು ನೀರು ಹರಿಸಲಾಗುತ್ತದೆ.

ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆ ಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆಹ್ವಾನಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಸಚಿವರ ಆಗಮನದ ಸಂದರ್ಭದಲ್ಲಿ ವಿವಿಧ ವಿಷಯ ಗಳ ಕುರಿತು ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸರ್ಕಾರದ ಸೂಚನೆ ಅನುಸಾರ ನಾಳೆಯಿಂದ ಅಕ್ರಮವಾಗಿ ನೀರು ಎತ್ತುವುದನ್ನು ತಡೆಗಟ್ಟಲು ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಶಾಸಕರಾದ ಬಿ.ಕೆ. ಸಂಗಮೇಶ್ವರ್ ಶಿವಗಂಗೆ ಬಸವರಾಜ್, ಹರೀಶ್, ಬಸವಂತಪ್ಪ ಸಂತೇಕಡೂರು ವಿಜಿ(ಧಣಿ), ಶಾಂತನಗೌಡ, ಶಾರದಾ ಪೂರ್ಯನಾಯ್ಕ್, ಎಂಎಲ್ ಸಿ ಬಲ್ಕೀಶ್ ಭಾನು, ಡಿ ಸಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ರೈತ ಸಂಘದ ಅಧ್ಯಕ್ಷ ಹೆಚ್.ಆರ್ ಬಸವರಾಜಪ್ಪ, ಕೆ.ಟಿ.ಗಂಗಾಧರ್, ದಾವಣಗೆರೆ ರೈತ ಒಕ್ಕೂಟದ ಲಿಂಗರಾಜು, ಭದ್ರ ಎಡದಂಡೆಯ ನೀರು ಬಳಕೆದಾರ ಸಂಘ ರಘುನಾಥ್, ಭದ್ರ ಜಲಾಶಯದ ಇಂಜಿನಿಯರ್ ರವಿ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು