ವಿಜಯ ಸಂಘರ್ಷ
ಶಿವಮೊಗ್ಗ : ತುಂಗಾ ಪ್ರೌಢಶಾಲೆ ಮಕ್ಕಳು ತುಂಬಾ ಪ್ರತಿಭಾವಂತ ರಾಗಿದ್ದು ಅವರಿಗೆ ಸಮವಸ್ತ್ರ ನೀಡುತ್ತಿರುವುದು ಹೆಮ್ಮೆಯ ವಿಷಯ ವಾಗಿದೆ. ರೋಟರಿ ಸಂಸ್ಥೆಯು ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಇತರೆ ಶಾಲೆ ಗಳಲ್ಲಿಯೂ ಕೂಡ ಮಕ್ಕಳಿಗೆ ಹಾಗೂ ಶಾಲೆಗೆ ಬೇಕಾಗುವ ಉಪಕರಣಗಳು ಸಮವಸ್ತ್ರಗಳನ್ನು ನೀಡುತ್ತಾ ಬಂದಿದ್ದೇವೆ ಎಂದು ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ಬಿನ ಅಧ್ಯಕ್ಷ ಕಿರಣ್ ಕುಮಾರ್ ಅಭಿಮತ ವ್ಯಕ್ತಪಡಿಸಿದರು.
ರೋಟರಿ ಶಿವಮೊಗ್ಗ ಸೆಂಟ್ರಲ್ ಕ್ಲಬ್ ವತಿಯಿಂದ ಮೇಲಿನ ಹನಸವಾಡಿ ತುಂಗಾ ಪ್ರೌಢಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಲಿನ ಹನಸವಾಡಿ ಶಾಲೆಗೆ ಮುಖ್ಯವಾಗಿ ಮಕ್ಕಳಿಗೆ ಸಮವಸ್ತ್ರ ಅವಶ್ಯಕತೆ ಇದೆ ಎಂದು ತಿಳಿದು ನಮ್ಮ ಕ್ಲಬ್ಬಿನಿಂದ ನೀಡುತ್ತಿದ್ದೇವೆ ತುಂಗಾ ಪ್ರೌಢ ಶಾಲೆಯು ಸುತ್ತಮುತ್ತ ಪ್ರಕೃತಿಯಿಂದ ತುಂಬಿದ್ದು, ಶಾಲೆಯ ಮಕ್ಕಳಿಗೆ ಕಲಿಯಲು ಸೂಕ್ತವಾದ ಪರಿಸರ ಶಾಲೆಯಲ್ಲಿದೆ. ಇದನ್ನು ಸದುಪಯೋಗಪಡಿಸಿಕೊಂಡು ಎಲ್ಲಾ ಮಕ್ಕಳು ಶ್ರದ್ಧೆಯಿಂದ ಓದಬೇಕು ಮುಂದಿನ ದಿನಗಳಲ್ಲಿ ಇನ್ನು ಅನೇಕ ಮಕ್ಕಳಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು ಮಾಡಲು ನಾವು ಸಿದ್ಧರಿದ್ದೇವೆ ಎಂದರು.
ತುಂಗಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜಪ್ಪ ಮಾತನಾಡಿ, ರೋಟರಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಲ್ಲಿ ಮುಖ್ಯವಾಗಿ ಶಾಲೆಗಳಲ್ಲಿ ಅಗತ್ಯವಾಗಿ ಮಕ್ಕಳಿಗೆ ಸಮವಸ್ತ್ರ ಅವಶ್ಯಕತೆ ಪೂರೈಸಿದ್ದು ಸಂತಸ ತಂದಿದೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ .ಜಿ.ಈ ಮಾತನಾಡಿ, ತುಂಗಾ ಪ್ರೌಢಶಾಲೆಯು ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದು ಒಳ್ಳೆಯ ಶಿಕ್ಷಕರು ಮುಖ್ಯೋಪಾಧ್ಯಾಯರು ನಮ್ಮ ಶಾಲೆಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಮಕ್ಕಳು ತಮ್ಮ ಅಣ್ಣಂದಿರು ಅಕ್ಕಂದಿರು ಹಾಕಿ ಕೊಂಡಿದ್ದ ಸಮವಸ್ತ್ರವನ್ನೇ ಬಳಸುತ್ತಿದ್ದರು ರೋಟರಿ ಸಂಸ್ಥೆಯು ಮಕ್ಕಳಿಗೆ ಸಮವಸ್ತ್ರ ನೀಡುತ್ತಿರುವುದು ಎಲ್ಲರ ಸೌಭಾಗ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ರೋಟರಿ ಶಿವಮೊಗ್ಗ ಸೆಂಟ್ರಲ್ ಕಬ್ಬಿನ ಕಾರ್ಯದರ್ಶಿ ಈಶ್ವರ್, ಸಂತೋಷ್, ಮಾಜಿ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರಮೇಶ್, ನಿರಂಜನ್ ಧರ್ಮೇಂದ್ರ ಸಿಂಗ್, ಬಸವರಾಜ್, ಬಲರಾಮ್, ಮೋಹನ್, ಮಂಜುನಾಥ್, ಆನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಗೀತಾ ಜಗದೀಶ್, ಸಹಕಾರ್ಯದರ್ಶಿ ನಯನ ಗಣೇಶ್ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.