ವಿಐಎಸ್‌ಎಲ್ ಸೊಸೈಟಿ ಅಮಾನತು: ಪರ್ಯಾಯ ವ್ಯವಸ್ಥೆ

ವಿಜಯ ಸಂಘರ್ಷ 
ಭದ್ರಾವತಿ: ನಗರದ ನ್ಯೂಟೌನ್ ನ್ಯಾಯಬೆಲೆ ಅಂಗಡಿ ಸಂಖ್ಯೆ-138/ 19130ವಿಐಎಸ್‌ಎಲ್ ಸೊಸೈಟಿಯನ್ನು ಅಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ
ಇಲಾಖೆ ಜಿಲ್ಲಾ ಉಪನಿರ್ದೇಶಕರು
ಅಮಾನತುಗೊಳಿಸಿದ್ದು, ಈ ಸೊಸೈಟಿ
ವ್ಯಾಪ್ತಿಯ ಪಡಿತರದಾರರಿಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ.

ಈ ನ್ಯಾಯಬೆಲೆ ಅಂಗಡಿಗೆ ಸoಬoಧಿಸಿದoತೆ ದೂರುಗಳು ಬಂದ ಹಿನ್ನಲೆಯಲ್ಲಿ ಆಹಾರ ಇಲಾಖೆ ನಿರೀಕ್ಷಕರು ಆ.6 ರಂದು ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಸೊಸೈಟಿಯಲ್ಲಿ 29.97 ಕ್ವಿಂಟಾಲ್ ಅಕ್ಕಿ ಬದಲು ಕೇವಲ 3.50 ಕ್ವಿಂಟಾಲ್ ಅಕ್ಕಿ ಕಂಡು ಬಂದಿದೆ. ಉಳಿದ 26.47 ಕ್ವಿಂಟಾಲ್ ಅಕ್ಕಿ ದಾಸ್ತಾನು ಇಲ್ಲದಿರುವ ಬಗ್ಗೆ ಹಾಗು ನ್ಯಾಯಬೆಲೆ ಅಂಗಡಿಯ ಇನ್ನಿತರ ನ್ಯೂನ್ಯತೆಗಳ ಬಗ್ಗೆ ಜಿಲ್ಲಾ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರು ಈ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಗೊಳಿಸಿ ವಿಚಾರಣೆ ಕಾಯ್ದಿರಿಸಿದ್ದಾರೆ. 
ಪಡಿತರದಾರರ ಹಿತದೃಷ್ಟಿಯಿಂದ ಸಮೀಪದ ನ್ಯಾಯಬೆಲೆ ಅಂಗಡಿ ಸಂಖ್ಯೆ-20 ಎಂ.ಎo ಕಾಂಪೌoಡ್, ಪಿಸಿಸಿಎಸ್, ತರೀಕೆರೆ ರಸ್ತೆ, ಇಲ್ಲಿಗೆ ಪಡಿತರ ವಿತರಿಸಲು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ. 

ಈ ಹಿನ್ನಲೆಯಲ್ಲಿ ಪಡಿತರದಾರರು ಆಗಸ್ಟ್ ಮಾಹೆಯಿಂದ ಪಡಿತರ ಪಡೆದುಕೊಳ್ಳಲು ಇಲಾಖೆಯ ಸಹಾಯಕ ನಿರ್ದೇಶಕರು
ಕೋರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು