ವಿಜಯ ಸಂಘರ್ಷ
ಕೆ.ಆರ್.ಪೇಟೆ: ಪ್ರಪಂಚದಲ್ಲೇ ಹಾಲು ಉದ್ದಿಮೆ ಪ್ರಸಿದ್ಧಿಯಾಗಿದೆ. ಪರಿಣಾಮ ಹೈನುಗಾರಿಕೆಯು ಜನರ ಪ್ರಮುಖ ಕಸುಬಾಗಿ ಸ್ಥಾನ ಪಡೆದಿದೆ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ತಿಳಿಸಿದರು.
ತಾಲೂಕಿನ ಮಾರುತಿ ನಗರ ಉತ್ಪಾದಕರ ಸಹಕಾರ ಮಹಿಳಾ ಸಂಘಗಳ ಆವರಣದಲ್ಲಿ ನೆಡೆದ 2023-24 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದನೆಯ ಗಾತ್ರದಲ್ಲಿ ಹೆಚ್ಚಾದರೆ, ಹೆಚ್ಚು ಪ್ರಯೋಜನ ಆಗುವುದಿಲ್ಲ. ಬದಲಿಗೆ ಗುಣಾತ್ಮಕ ಹಾಲು ಉತ್ಪಾದನೆ ಅತ್ಯಗತ್ಯ. ಮಾರುಕಟ್ಟೆಯಲ್ಲಿ ಗುಣಮಟ್ಟದ ಹಾಲಿಗೆ ಮಾತ್ರ ಮಾನ್ಯತೆ ಇದೆ. ಹಾಲು ಉತ್ಪಾದಕರು ಈ ಬಗ್ಗೆ ಹೆಚ್ಚು ಗಮನ ನೀಡಬೇಕು. ಗುಣ ಮಟ್ಟದ ಹಾಲು ಉತ್ಪಾದನೆಗೆ ಪೂರಕವಾದ ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದು ಹೇಳಿದರು.
ಹೈನುಗಾರಿಕೆಯ ವಿಚಾರದಲ್ಲಿ ಮಹಿಳಾ ಸಂಘಗಳು ಹೆಚ್ಚು ಕ್ರಿಯಾಶೀಲ ವಾಗಿದ್ದು ಅನೇಕ ಗ್ರಾಮೀಣ ಮಹಿಳೆ ಯರು ಹೈನುಗಾರಿಕೆಯಿಂದ ಸ್ವಾವಲಂಬನೆಯ ಬದುಕು ಕಂಡು ಕೊಂಡಿದ್ದಾರೆ. ಹೈನುಗಾರಿಕೆ ಯಲ್ಲಿ ತೊಡಗಿಸಿಕೊಳ್ಳುವ ಮಹಿಳಾ ಸಂಘಗಳಿಗೆ ಮನಮುಲ್ ಒಕ್ಕೂಟ ದಿಂದ ಅನೇಕ ಸೌಲಭ್ಯಗಳು ದೊರೆಯುತಿದ್ದು, ಇವುಗಳನ್ನು ಸದುಪ ಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಂಘದ ಅಧ್ಯಕ್ಷೆ ನಿರ್ಮಲ ಯೋಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ನಿರ್ಮಲ ಯೋಗೇಶ್,ಉಪಾಧ್ಯಕ್ಷೆ ರಾಣಿ ಸತೀಶ್, ನಿರ್ದೇಶಕರಾದ ಕೋಮಲ, ನರಸಮ್ಮ, ಲಕ್ಷ್ಮಮ್ಮ, ಸವಿತ, ಯಶೋಧಮ್ಮ, ಸವಿತ, ವೃಂದ, ಶಂಶದ ಬಾನು, ಸಾವಿತ್ರಮ್ಮ, ಯಶೋಧಮ್ಮ, ಕಾರ್ಯದರ್ಶಿ ರೇಖಾ ಯೋಗೇಶ್, ಮಾರ್ಗ ವಿತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ, ಹಾಲು ಪರೀಕ್ಷಕಿ ನಂದಿನಿ, ಲಕ್ಷ್ಮಿ,ಗ್ರಾ. ಪಂ ಸದಸ್ಯೆ ಅನುಮ ಮಾದೇವ,ಗ್ರಾ. ಪಂ ರೂಪಮದೇವ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನವೀನ್, ಮುಖಂಡ ರಾದ ನಾಗರಾಜೇಗೌಡ,ಮಂಜೇಗೌಡ, ನಿಂಗೇಗೌಡ ಸೇರಿದಂತೆ ಉಪಸ್ಥಿತರಿದ್ದರು.
(✍️ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ)
Tags:
ಕೆ.ಆರ್. ಪೇಟೆ ವರದಿ