ಕರಾಟೆಯಲ್ಲಿ ಜೀವಾತ್ಮ ಜಿ.ಬಿರ್ಜೆ ದ್ವಿತೀಯ ಸ್ಥಾನ

ವಿಜಯ ಸಂಘರ್ಷ 
ಶಿವಮೊಗ್ಗ: ಕೇರಳ ರಾಜ್ಯದ ತಿರುವನಂತಪುರದಲ್ಲಿ ಇತ್ತೀಚೇಗೆ ಆಯೋಜಿಸಿದ್ದ 19ನೇ ಏಷಿಯನ್ ಸೆಲೆಕ್ಷನ್ ಟೂರ್ನಮೆಂಟ್‌ನಲ್ಲಿ ಕರಾಟೆ ವಿದ್ಯಾರ್ಥಿ ಜೀವಾತ್ಮ ಜಿ.ಬಿರ್ಜೆ ಸ್ಪರ್ಧಿಸಿ ದ್ವಿತೀಯ ಸ್ಥಾನ ಗಳಿಸಿ ಟ್ರೋಫಿ ಹಾಗೂ ಪ್ರಮಾಣ ಪತ್ರ ಪಡೆದಿರುತ್ತಾರೆ.

50-55 ಕೆಜಿ ಸ್ಪರ್ಧಿಗಳ ವಿಭಾಗದಲ್ಲಿ ಸಾಧನೆ ಮಾಡಿರುವ ಜೀವಾತ್ಮ ಜಿ.ಬಿರ್ಜೆ ಶಿವಮೊಗ್ಗದ ಗಾಡಿಕೊಪ್ಪ ದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪತ್ರಕರ್ತ ಗಿರಿಧರ ಎಂ.ಗಾಡಿಕೊಪ್ಪ ಹಾಗೂ ಶಿಕ್ಷಕಿ ಬಿ.ಎಸ್.ಸರಸ್ವತಿ ಬಾಯಿ ದಂಪತಿ ಪುತ್ರ. ಫ್ಲಾರೆನ್ಸ್ ಇಂಗ್ಲಿಷ್ ಪಬ್ಲಿಕ್ ಸ್ಕೂಲ್‌ನಲ್ಲಿ 7ನೇ ತರಗತಿ ವಿದ್ಯಾರ್ಥಿ ಯಾಗಿದ್ದಾರೆ. 

ಕರಾಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಜೀವಾತ್ಮ ಜಿ.ಬಿರ್ಜೆ ಅವರ ಸಾಧನೆಗೆ ಡಬ್ಲ್ಯೂಕೆಒ ಇಂಡಿಯಾದ ಕರ್ನಾಟಕ ಇನ್‌ಸ್ಟಕ್ಟರ್ ಹಾಗೂ ಸ್ಟುಡಿಯೋ ಮಾಸ್ಟರ್ ಬಾಬು ಎಸ್. ಕರ್ನಾಟಕ ಬ್ರಾಂಚ್ ಮುಖ್ಯಸ್ಥ ಫೆರೋಜ್ ಖಾನ್ ಹಾಗೂ ಪೋಷಕ ರಾದ ಗಿರಿಧರ ಎಂ.ಗಾಡಿಕೊಪ್ಪ, ಸರಸ್ವತಿ ಬಾಯಿ ಅಭಿನಂದಿಸಿದ್ದಾರೆ.

ಜೀವಾತ್ಮ ಅವರು ಬೆಂಗಳೂರಿನ ಆರ್‌ಜಿ ಫಿಟ್‌ನೆಸ್ ಅಂಡ್ ಪರ್ಸನಲ್ ಟ್ರೈನಿಂಗ್ ಸ್ಟುಡಿಯೋದಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು