ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಹೊಂಡ ಗುಂಡಿಗಳು: ಅಧಿಕಾರಿಗಳು ಗಮನಿಸಲಿ..?

ವಿಜಯ ಸಂಘರ್ಷ 
ಭದ್ರಾವತಿ: ನಗರದ ಉಂಬ್ಳೆಬೈಲು ಮಾರ್ಗದ ಮೂಲೆಕಟ್ಟೆ ಸಮೀಪದ ರಸ್ತೆಯ ಮಧ್ಯ ಭಾಗದಲ್ಲಿ ಬೃಹತ್ ಗಾತ್ರದ ಹೊಂಡಗಳು ಬಿದ್ದಿದ್ದು, ಸಂಬಂಧಿತ ಲೋಕೋಪಯೋಗಿ ಇಲಾಖೆ ಕಣ್ಮುಚ್ಚಿ ಕುಳಿತಿದೆ.

ಇಲ್ಲಿಯವರೆಗೆ ಯಾವುದೇ ರೀತಿಯ ಹೊಂಡ ಮುಚ್ಚುವ ಕೆಲಸ ಅಧಿಕಾರಿ ಗಳು ನಿರ್ವಹಿಸ ಲಿಲ್ಲ ಎಂಬ ಆಕ್ರೋಶದ ಮಾತುಗಳು ಅಲ್ಲಿನ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಈ ಹೊಂಡ ರಾತ್ರಿ ಸಮಯದಲ್ಲಿ ಮಳೆ ಇರುವುದರಿಂದ ಮಂಜು ಮುಸುಕು ಆವರಿಸಿರುತ್ತದೆ. ಈ ಸಮಯದಲ್ಲಿ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಹೊಂಡ ಕಾಣದೇ ಹತ್ತಿರ ಹೋಗಿ ನಿಂತು ಕೋಪದಿಂದ ಇಲಾಖೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹೋಗುತ್ತಿದ್ದಾರೆ.

ಅಲ್ಲದೆ ಮೂಲೆಕಟ್ಟೆಯಿಂದ ಬೊಮ್ಮನ ಕಟ್ಟೆಯ ಸರ್ಕಾರಿ ಸರ್.ಎಂ. ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನಾನು ಕೂಲವಾಗಿದ್ದು ವಿದ್ಯಾರ್ಥಿಗಳು ಶಪಿಸುತ್ತಿದ್ದಾರೆ. ರಸ್ತೆಯಲ್ಲಿ ಹೊಂಡ ಗುಂಡಿ ಗಳು ಬಿದ್ದಿದ್ದು ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತಿದೆ. ಇನ್ನು ನಗರದಿಂದ ಕೂಗಳತೆ ದೂರದಲ್ಲಿ ಇರುವ ಈ ರಸ್ತೆ ಸರಿಪಡಿಸಿದರೂ ಕೂಡ ಪುನಃ ಹೊಂಡ ಗುಂಡಿಗಳು ಬಿದ್ದಿದ್ದು ಇವೆಲ್ಲವೂ ಕೂಡ ಯಾವುದೇ ಸಮಯದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.

ಇನ್ನಾದರೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಗಮನಿಸಿ ಹೊಂಡ ಗುಂಡಿ ಮುಚ್ಚುವ ಕೆಲಸ ಮಾಡಲಿ ಎಂಬ ಮಾತು ಪ್ರಯಾಣಿ ಕರು ಹಾಗೂ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು