ವಿಜಯ ಸಂಘರ್ಷ
ಶಿವಮೊಗ್ಗ: ಜೀವನದಲ್ಲಿ ಮಹತ್ತರ ತಿರುವ ಪಡೆದುಕೊಳ್ಳುವ ಕಾಲಘಟ್ಟ ವಯಸ್ಸು ನಲವತ್ತು. ಆರೋಗ್ಯದ ಬಗ್ಗೆ ಹೆಚ್ಚು ಮಹತ್ವ ವಹಿಸಬೇಕಾದ ಸಮಯ ಇದಾಗಿದೆ ಎಂದು ಶಿಕ್ಷಕಿ ದೀಪಾ ಕುಬಸದ್ ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಯಿಂದ ನಗರದ ರೋಟರಿ ಸಭಾಂಗಣ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೈಫ್ 40+ ಕುರಿತು ಉಪನ್ಯಾಸ ನೀಡಿದರು.
ನಲವತ್ತು ವಯಸ್ಸು ದಾಟಿದ ಸಂದರ್ಭ ದಲ್ಲಿ ಜೀವನದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕ.ಪರಿಶುದ್ಧ ಹಾಗೂ ಸಾತ್ವಿಕ ಆರೋಗ್ಯ ಪದ್ಧತಿ ಅಳವಡಿಸಿಕೊಳ್ಳ ಬೇಕು. ದೈಹಿಕ ವ್ಯಾಯಾಮ, ನಡಿಗೆ, ಯೋಗ ಹಾಗೂ ಪ್ರಾಣಾಯಾಮ ಅಭ್ಯಾಸ ದಿನನಿತ್ಯ ಮಾಡಬೇಕು. ಸಮಾಧಾನ, ತಾಳ್ಮೆಯಿಂದ ವರ್ತಿಸುವುದು ಅಗತ್ಯ. ಪ್ರೀತಿ, ವಿಶ್ವಾಸ ದಿಂದ ನಡೆದು ಕೊಳ್ಳಬೇಕು ಎಂದರು.
ಬಿಡುವಿನ ಅವಧಿಯನ್ನು ಅರ್ಥ ಪೂರ್ಣವಾಗಿ ವಿನಿಯೋಗಿಸಬೇಕು. ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಜೀವನದ ಪ್ರಮುಖ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ರೋಟರಿ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ನಿರಂತರವಾಗಿ ಸಾಮಾಜಿಕ ಸೇವಾ ಚಟುವಟಿಕೆ ಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಆರೋಗ್ಯ ಜಾಗೃತಿ ಬಗ್ಗೆಯೂ ವಿಶೇಷ ಶಿಬಿರ ಹಾಗೂ ಉಪನ್ಯಾಸಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಸಹಾಯಕ ಮಾಜಿ ಗವರ್ನರ್ ಜಿ.ವಿಜಯ ಕುಮಾರ್, ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಸುಮತಿ ಕುಮಾರಸ್ವಾಮಿ, ಡಾ. ಪರಮೇಶ್ವರ್ ಶಿಗ್ಗಾವ್, ಕಿಶೋರ್ಕುಮಾರ್, ಡಾ. ಧನಂಜಯ, ನಾಗವೇಣಿ, ಗೀತಾ ಚಿಕ್ಮಠ್, ಕೇಶವಪ್ಪ, ಚಂದ್ರ ಶೇಖರಯ್ಯ ಸೇರಿದಂತೆ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ರೋಟರಿ ಸುದ್ದಿ