ಜೋಗ ಜಲಪಾತ ವೀಕ್ಷಕರೆ ಗಮನಿಸಿ ವೀಕ್ಷಣೆಗೆ ಹೆಚ್ಚಿನ ಶುಲ್ಕ: ಎರಡು ಗಂಟೆ ಮಾತ್ರ ಸೀಮಿತ

ವಿಜಯ ಸಂಘರ್ಷ 
ಸಾಗರ: ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರವಾಸಿಗರಿಗೆ ವೀಕ್ಷಣೆಗೆ ನಿರ್ವಹಣಾ ಪ್ರಾಧಿಕಾರ ಜಲಪಾತ ವೀಕ್ಷಣೆಗೆ ಹೆಚ್ಚಿನ ಶುಲ್ಕ ವಿಧಿಸಿದೆ. ಹೆಚ್ಚಿಸಿರುವ ದರಕ್ಕೆ ಪ್ರವಾಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೋಗವನ್ನು ಅಭಿವೃದ್ಧಿ ಪಡಿಸುವ ವೇಳೆ ಜಲಪಾತದ ವೀಕ್ಷಣೆಯ ದರ ಏರಿಕೆ ಯಾವ ಕಾರಣಕ್ಕೆ ಮಾಡಿದರು ಎಂಬ ಪ್ರಶ್ನೆಯನ್ನು ಸ್ಥಳೀಯರು ಮಾಡುತ್ತಿದ್ದಾರೆ. ಜೋಗ ಜಲಪಾತದ ಪ್ರವೇಶ ದರ, ಪಾರ್ಕಿಂಗ್​ ದರವನ್ನು ಏರಿಕೆ ಮಾಡಲಾಗಿದೆ. ಅಲ್ಲದೇ ಜಲಪಾತದ ವೀಕ್ಷಣೆಯನ್ನು ಪ್ರವಾಸಿ ಗರಿಗೆ ಕೇವಲ ಎರಡು ಗಂಟೆಗೆ ಸೀಮಿತ ಮಾಡಲಾಗಿದೆ.

ಜೋಗದಲ್ಲಿ ಹಿಂದೆ ಇದ್ದ ದರಕ್ಕಿಂತ ಶೇ 30 ರಿಂದ ಶೇ 50 ರಷ್ಟು ಏರಿಕೆ ಮಾಡಲಾಗಿದೆ. ಹಿಂದೆ ಬಸ್​​ಗೆ 150 ರೂ. ಇತ್ತು. ಈಗ ಅದನ್ನು 200ಕ್ಕೆ ಏರಿಕೆ ಮಾಡಲಾಗಿದೆ. ಅದೇ ರೀತಿ ಕಾರಿಗೆ 50 ರೂ. ಇದ್ದು ಅದನ್ನು 80 ರೂ. ಏರಿಕೆ ಮಾಡಲಾಗಿದೆ. ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ. ಗೆ ಏರಿಕೆ ಮಾಡಲಾಗಿದೆ. ಶುಲ್ಕ ಏರಿಕೆ ಮಾಡಿ ಜೋಗ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಫಲಕವನ್ನು ಅಳವಡಿಸಿದೆ. ಪ್ರಕೃತಿ ದತ್ತವಾಗಿರುವ ಜಲಪಾತ ವೀಕ್ಷಣೆಗೆ ಏಕೆ ದುಬಾರಿ ಶುಲ್ಕ ಎಂಬುದು ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು