ಶಿಮುಲ್ ಅಧ್ಯಕ್ಷ- ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ಪಾಲು

ವಿಜಯ ಸಂಘರ್ಷ 
ಶಿವಮೊಗ್ಗ: ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಸೋಮವಾರ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಅಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಾಲಾಗಿದೆ.

ಅಧ್ಯಕ್ಷರಾಗಿ ವಿದ್ಯಾಧರ ಹಾಗೂ ಉಪಾಧ್ಯಕ್ಷ ರಾಗಿ ಚೇತನ್ ಎಸ್ ನಾಡಿಗರ್ ಅವಿರೋಧ ಆಯ್ಕೆ ಯಾಗಿದ್ದಾರೆ.

ಹೊಸನಗರದಿಂದ ಶಿಮೂಲ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ವಿದ್ಯಾಧರ್ ಮತ್ತು ದಾವಣಗೆರೆ ವಿಭಾಗದಿಂದ ಚೇತನ್ ಎಸ್ ನಾಡಿಗರ್ ಆಯ್ಕೆಯಾಗಿದ್ದಾರೆ.

ಶಿಮೂಲ್ ನಲ್ಲಿ 14 ನಿರ್ದೇಶಕ ಸ್ಥಾನಗಳಿದ್ದು, 8 ಕಾಂಗ್ರೆಸ್ ಬೆಂಬಲಿತ, 4 ಬಿಜೆಪಿ 1 ಜೆಡಿಎಸ್ 1 ಪಕ್ಷೇತರರಾಗಿ ಆಯ್ಕೆಯಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು